ಈ ಎಲೆಯನ್ನು ಮೂಸಿದ್ರೆ ಸಾಕು: ವಾರವಾದ್ರೂ ಕಡಿಮೆಯಾಗದ ಶೀತ, ಕೆಮ್ಮು, ನೆಗಡಿ ಚಿಟಿಕೆಯಲ್ಲಿ ಗುಣವಾಗುತ್ತೆ!
ದೊಡ್ಡಪತ್ರೆಯನ್ನು ಸಾಂಬ್ರಾಣಿ, ಸೆಲರಿ ಎಲೆ ಎಂದು ಕರೆಯಲಾಗುತ್ತದೆ.ಇದರಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯಿದ್ದು, ಆಯುರ್ವೇದದಲ್ಲಿ ಬಹಳ ಪ್ರಮುಖವಾಗಿ ಬಳಸಲಾಗುತ್ತದೆ.
ಈ ಔಷಧೀಯ ಸಸ್ಯವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಶೀತ ಮತ್ತು ಕೆಮ್ಮು ಕಡಿಮೆ ಮಾಡಲು ಬಹಳ ಪ್ರಯೋಜನಕಾರಿಯಾಗಿದೆ.
ದೊಡ್ಡಪತ್ರೆಗಳಲ್ಲಿ ಉರಿಯೂತದ ಮತ್ತು ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಈ ಎಲೆಗಳನ್ನು ಹೆಚ್ಚು ಪ್ರಯೋಜನಕಾರಿ ಮಾಡುತ್ತದೆ.
ಈ ಬದಲಾಗುತ್ತಿರುವ ಋತುವಿನಲ್ಲಿ, ಶೀತ ಮತ್ತು ಕೆಮ್ಮು ತುಂಬಾ ಸಾಮಾನ್ಯ. ಹೀಗಿರುವಾಗ ದೊಡ್ಡಪತ್ರೆ ಎಲೆಯಿಂದ ಚಿಟಿಕೆಯಲ್ಲಿ ಪರಿಹಾರವನ್ನು ಕಂಡುಕೊಳ್ಳಬಹುದು. ಆಂಟಿಬಯೋಟಿಕ್ಗಳನ್ನು ತೆಗೆದುಕೊಳ್ಳಲು ಬಯಸದಿದ್ದರೆ ಈ ಆಯುರ್ವೇದ ಔಷಧವು ನಿಮಗೆ ತುಂಬಾ ಪರಿಣಾಮಕಾರಿಯಾಗುತ್ತದೆ.
ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಸಸ್ಯ ಇದು. ರೋಗನಿರೋಧಕ ಶಕ್ತಿ ವರ್ಧಕವಾಗಿದೆ. ಕೆಮ್ಮು ಮತ್ತು ಶೀತವಾಗಿದ್ದರೆ, ದೊಡ್ಡಪತ್ರೆ ಎಲೆಯನ್ನು ಎರಡು ತುಂಡು ಮಾಡಿ ಅದರ ವಾಸನೆಯನ್ನು ತೆಗೆದುಕೊಳ್ಳಿ. ಈ ವಿಧಾನದ ಮೂಲಕ ತಕ್ಷಣವೇ ಪರಿಹಾರ ಪಡೆಯಬಹುದು.
ದೊಡ್ಡಪತ್ರೆ ಎಲೆಗಳನ್ನು ಕಡಿಮೆ ಉರಿಯಲ್ಲಿ ಕುದಿಸಿ ಕಷಾಯದಂತೆ ಮಾಡಬೇಕು. ಇದಕ್ಕೆ ರುಚಿಗೆ ಜೇನುತುಪ್ಪ ಬೇಕಾದಲ್ಲಿ ಸೇರಿಸಬಹುದು, ಏಕೆಂದರೆ ಜೇನುತುಪ್ಪವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಈ ಕಷಾಯವು ಉಗುರುಬೆಚ್ಚಗಿರುವಾಗ ಕುಡಿದರೆ ಒಳ್ಳೆಯದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)