Uric Acid: ಈ ಎಲೆ ಜಗಿದು ರಸ ನುಂಗಿದರೆ ಸಂದುಗಳಲ್ಲಿ ಅಂಟಿದ ಯುರಿಕ್ ಆಸಿಡ್ ಕರಗಿ ಹೋಗಿ.. ಕಿಡ್ನಿ ಸ್ಟೋನ್ ಕೂಡ ಪುಡಿಯಾಗುವುದು!
)
ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದರೆ ಹಲವು ಸಮಸ್ಯೆಗಳು ಕಾಡಲು ಆರಂಭಿಸುತ್ತವೆ. ಯುರಿಕ್ ಆಸಿಡ್ ಸ್ಫಟಿಕದ ರೂಪದಲ್ಲಿ ಮೂಳೆಗಳ ಸಂದುಗಳ ನಡುವೆ ಸಿಲುಕಿಕೊಳ್ಳಬಹುದು.
)
ಯುರಿಕ್ ಆಸಿಡ್ ಪ್ರಮಾಣ ದೇಹದಲ್ಲಿ ಅಧಿಕವಾದಾಗ ಕೀಲುಗಳಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಕೆಲವು ಮನೆಮದ್ದುಗಳ ಮೂಲಕ ಇದಕ್ಕೆ ಪರಿಹಾರ ಪಡೆಯಬಹುದು.
)
ದೊಡ್ಡಪತ್ರೆ ಅಥವಾ ಅಜ್ವೈನ್ ಎಲೆ ಯುರಿಕ್ ಆಸಿಡ್ ಹರಳುಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ದೊಡ್ಡಪತ್ರೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿವೆ.
ಪ್ರತಿದಿನ ಒಂದೆರಡು ದೊಡ್ಡಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ರಸ ಹಿಂಡಿ ಕುಡಿದರೆ ಯುರಿಕ್ ಆಸಿಡ್ ಮಟ್ಟ ನಿಯಂತ್ರಣಕ್ಕೆ ಬರುವುದು.
ಇದಲ್ಲದೇ ದೊಡ್ಡಪತ್ರೆ ಎಲೆಗಳ ತಂಬುಳಿ ಮಾಡಿಯೂ ಸೇವಿಸಬಹುದು. ಇದರಿಂದಲೂ ಯುರಿಕ್ ಆಸಿಡ್ ಹರಳುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.
ದೊಡ್ಡಪತ್ರೆ ಎಲೆಗಳ ರಸವನ್ನು ಮಜ್ಜಿಗೆಗೆ ಬೆರೆಸಿ ಕುಡಿಯಬೇಕು. ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.