ಈ ಎಲೆಯನ್ನು ಚೆನ್ನಾಗಿ ಜಗಿದು ರಸ ನುಂದಿದರೆ ಸಾಕು.. ಕಿಡ್ನಿ ಸ್ಟೋನ್ ಕರಗಿ ನೋವಿಲ್ಲದಂತೆ ಹೊರ ಹೋಗುವುದು!
ಹೆಚ್ಚುತ್ತಿರುವ ತೂಕ ಮತ್ತು ಕೆಲವು ವೈದ್ಯಕೀಯ ಪರಿಸ್ಥಿತಿಗಳು ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಲು ಕಾರಣವಾಗುತ್ತದೆ. ಮೂತ್ರನಾಳದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉಂಟಾಗುತ್ತವೆ.
ಕಿಡ್ನಿ ಸ್ಟೋನ್‌ಗಳನ್ನು ನಿವಾರಿಸುವಲ್ಲಿ ದೊಡ್ಡಪತ್ರೆ ಗಿಡದ ಎಲೆಯ ರಸವು ಹೆಚ್ಚು ಪ್ರಯೋಜನಕಾರಿಯಾಗಿದೆ.
ದೊಡ್ಡಪತ್ರೆ ಸಾಷಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಊತ, ಶೀತ, ಕೆಮ್ಮು ಗುಣಪಡಿಸಲು ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲು ದೊಡ್ಡಪತ್ರೆ ಬಳಸಲಾಗುತ್ತದೆ.
ದೊಡ್ಡಪತ್ರೆ ಎಲೆಯನ್ನು ಜಗಿದು ರಸ ನುಂಗುವುದರಿಂದ ಮೂತ್ರಪಿಂಡದ ಕಲ್ಲುಗಳು ಕರಗುತ್ತವೆ.
ದೊಡ್ಡಪತ್ರೆ ರಸವು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡುತ್ತದೆ. ಇವುಗಳಲ್ಲಿ ಕಂಡುಬರುವ ಕೆಲವು ಸಂಯುಕ್ತಗಳು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಸ್ಥಿರಗೊಳಿಸಬಹುದು.
ಯೂರಿಕ್ ಆಸಿಡ್ ಮೂತ್ರಪಿಂಡದ ಕಲ್ಲುಗಳನ್ನು ಹೆಚ್ಚಿಸುತ್ತದೆ. ಇದಲ್ಲದೇ ದೊಡ್ಡಪತ್ರೆ ಎಲೆಗಳು ಈ ಕಿಡ್ನಿ ಸ್ಟೋನ್ ಅನ್ನು ಕರಗಿಸಲು ಸಹಕಾರಿಯಾಗಿದೆ.
ನೀವು ಮೂತ್ರಪಿಂಡದ ಕಲ್ಲುಗಳನ್ನು ಹೊಂದಿದ್ದರೆ ಪ್ರತಿದಿನ ಒಂದು ಚಮಚ ದೊಡ್ಡಪತ್ರೆ ಎಲೆಯ ರಸವನ್ನು ಕುಡಿಯಬಹುದು.
ಹಸಿ ದೊಡ್ಡಪತ್ರೆ ಎಲೆಗಳನ್ನು ಕೂಡ ಸೇವಿಸಬಹುದು. ದೊಡ್ಡಪತ್ರೆ ಎಲೆಯನ್ನು ಜಗಿದು ಅದರ ರಸ ನುಂಗುವುದರಿಂದಲೂ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಿಸಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.