ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್’ಗೆ ಬಾಯ್ ಫ್ರೆಂಡ್ ಇದ್ದಾರಾ? ಕಡೆಗೂ ಸಿಕ್ಕೇಬಿಡ್ತು ಸ್ಪಷ್ಟ ಉತ್ತರ
21 ವರ್ಷದ ಶ್ರೇಯಾಂಕಾ ಪಾಟೀಲ್, ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಪ್ರೀಮಿಯರ್ ಕ್ರಿಕೆಟ್ ಲೀಗ್’ನಲ್ಲಿ ಆರ್ ಸಿ ಬಿ ಪರ ಆಡಿದ್ದರು. ಈ ಲೀಗ್’ನ ಅಂತಿಮ ಪಂದ್ಯದಲ್ಲಿ, ಶ್ರೇಯಾಂಕಾ 3.3 ಓವರ್’ಗಳಲ್ಲಿ 12 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದ್ದರು.
ಶ್ರೇಯಾಂಕಾ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿ ಕೇವಲ ಮೂರು ತಿಂಗಳಾಗಿದೆ. ಆದರೆ ತನ್ನ ಪ್ರಬುದ್ಧ ಪ್ರದರ್ಶನದಿಂದ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಬಲಗೈ ಆಫ್ ಸ್ಪಿನ್ನರ್ ಮತ್ತು ಬ್ಯಾಟ್ಸ್‌ಮನ್ ಎರಡು ODI ಅಂತರಾಷ್ಟ್ರೀಯ ಪಂದ್ಯಗಳಲ್ಲಿ ನಾಲ್ಕು ವಿಕೆಟ್’ಗಳನ್ನು ಮತ್ತು ಆರು T20I ಗಳಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಿದ್ದಾರೆ.
ಡಬ್ಲ್ಯುಪಿಎಲ್ ಬಗ್ಗೆ ಮಾತನಾಡುವುದಾದರೆ, ಕೇವಲ 10 ಲಕ್ಷಕ್ಕೆ ಆರ್ ಸಿ ಬಿ ಸೇರಿಕೊಂಡ ಶ್ರೇಯಾಂಕಾ ಮೊದಲ ಸೆಷನ್’ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದರು
ಇನ್ನು ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆ ಇವರ ಹೆಸರಿನಲ್ಲಿದೆ. ಅಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪ್ರವೇಶಿಸುವ ಮುನ್ನವೇ ವಿದೇಶಿ ಲೀಗ್‌ನಲ್ಲಿ ಗುತ್ತಿಗೆ ಪಡೆದ ಮೊದಲ ಭಾರತೀಯ ಆಟಗಾರ್ತಿ ಕೂಡ ಶ್ರೇಯಾಂಕ.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಶ್ರೇಯಾಂಕ ಮೇಲೆ ಅನೇಕ ಯುವಕರಿಗೆ ಕ್ರಶ್ ಆಗಿದ್ದುಂಟು. ಅಷ್ಟೇ ಅಲ್ಲದೆ ಆಕೆಗೆ ಬಾಯ್ ಫ್ರೆಂಡ್ ಇದ್ದಾರಾ? ಎಂದೆಲ್ಲಾ ಗೂಗಲ್’ನಲ್ಲಿ ಸರ್ಚ್ ಕೂಡ ಮಾಡಿದ್ದರಂತೆ. ಇದೀಗ ಆ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಕ್ಕಿದೆ.
ಇತ್ತೀಚೆಗೆ ನಡೆದ ಖಾಸಗಿ ಸಂದರ್ಶನವೊಂದರಲ್ಲಿ ಶ್ರೇಯಾಂಕಾ ಪಾಟೀಲ್ ಅವರ ಕೋಚ್, ಈ ಪ್ರಶ್ನೆಗೆ ವಿಭಿನ್ನವಾಗಿ ಉತ್ತರ ನೀಡಿದ್ದಾರೆ. ಶ್ರೇಯಾಂಕಾ ಪಾಟೀಲ್’ಗೆ ಬಾಯ್ ಫ್ರೆಂಡ್ ಇದ್ದಾರಾ? ಎಂದು ಸಂದರ್ಶಕರು ಪ್ರಶ್ನೆ ಮಾಡಿದಾಗ, ಪ್ರತಿಕ್ರಿಯಿಸಿದ ಕೋಚ್, “ಈ ಬಗ್ಗೆ ಅವರ ಬಳಿ ಕೇಳಿ. ಒಂದು ವೇಳೆ ಇದ್ದರೆ ನನಗೆ ತಿಳಿಸಿ” ಎಂದು ಹೇಳಿದ್ದಾರೆ.
ಅಷ್ಟಕ್ಕೂ ಅವರ ಮಾತಿನ ಅರ್ಥ ಏನೆಂಬುದು ತಿಳಿದಿಲ್ಲವಾದರೂ, ಮೇಲ್ನೋಟಲ್ಲೆ ಶ್ರೇಯಾಂಕ ಇನ್ನೂ ಸಿಂಗಲ್ ಅನ್ನುವಂತಿದೆ. ಇನ್ನೊಂದೆಡೆ ಕೋಚ್ ಹೇಳಿಕೆ ಕೇಳಿ ಅನೇಕ ಯುವಕರು ಖುಷಿಪಟ್ಟಿದ್ದು ಸುಳ್ಳಲ್ಲ.