Smriti Mandhana: ಸ್ಮೃತಿ ಮಂಧಾನ ಕೋಪದಲ್ಲೂ ಇಷ್ಟೊಂದು ಮುದ್ದಾಗಿ ಕಾಣಿಸೋದಾ…? ಈ ಫೋಟೋ ನೋಡಿ

Tue, 21 Feb 2023-3:53 pm,

ಸ್ಮೃತಿ ಮಂಧಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಸ್ತುತ ಯುಗದ ಅತ್ಯುತ್ತಮ ಬ್ಯಾಟರ್ ಆಗಿದ್ದಾರೆ. ಲೆಕ್ಕವಿಲ್ಲದಷ್ಟು ಸಂದರ್ಭಗಳಲ್ಲಿ ಭಾರತ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಾರೆ. ಜೊತೆಗೆ ಮ್ಯಾಚ್ ವಿನ್ನರ್ ಕೂಡ ಆಗಿದ್ದಾರೆ. 2013 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಸ್ಮೃತಿ ಮಂಧಾನ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ.

ಮಂಧಾನ ಭಾರತವನ್ನು 51 ODIಗಳಲ್ಲಿ ಪ್ರತಿನಿಧಿಸಿದ್ದಾರೆ. 43.1 ರ ಪ್ರಭಾವಶಾಲಿ ಸರಾಸರಿಯಲ್ಲಿ 2025 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಶತಕಗಳು ಮತ್ತು 17 ಅರ್ಧಶತಕಗಳು ಸೇರಿವೆ. 75 T20I ಗಳಲ್ಲಿ, ಮಂಧಾನ 12 ಅರ್ಧಶತಕಗಳನ್ನು ಒಳಗೊಂಡಂತೆ 25.2 ರ ಸರಾಸರಿಯಲ್ಲಿ 1716 ರನ್ ಗಳಿಸಿದ್ದಾರೆ. ಎರಡು ಟೆಸ್ಟ್‌ಗಳನ್ನು ಆಡಿದ್ದು, ಒಂದು ಅರ್ಧಶತಕದೊಂದಿಗೆ 27 ರ ಸರಾಸರಿಯಲ್ಲಿ 81 ರನ್ ಗಳಿಸಿದ್ದಾರೆ.

ಸ್ಮೃತಿ ಮಂಧಾನ ಅವರ ತವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಅವರ ಕ್ರಿಕೆಟ್ ಪ್ರಯಾಣ ಪ್ರಾರಂಭವಾಯಿತು. ಆಕೆಯ ತಂದೆ ಮತ್ತು ಹಿರಿಯ ಸಹೋದರ ಸಾಂಗ್ಲಿಗಾಗಿ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದರು ಮತ್ತು ಮಹಾರಾಷ್ಟ್ರ ರಾಜ್ಯದ 16 ವರ್ಷದೊಳಗಿನವರ ಪಂದ್ಯಾವಳಿಗಳಲ್ಲಿ ತನ್ನ ಸಹೋದರ ಆಡುವುದನ್ನು ನೋಡಿದ ಅವರು ಕ್ರಿಕೆಟ್ ನಲ್ಲಿ ಮುಂದುವರೆಯಬೇಕು ಎಂದು ಭಾವಿಸಿದರು.

ಸದ್ಯ ಸ್ಮೃತಿ ಮಂಧಾನ ಎಂದರೆ ಸಖತ್ ಸುಂದರವಾದ ಕ್ರಿಕೆಟ್ ಆಟಗಾರ್ತಿ ಎನ್ನಲಾಗುತ್ತದೆ. ಈಕೆಯ ಬ್ಯಾಟಿಂಗ್ ನಲ್ಲಿ ಅಬ್ಬರಿಸೋದು ಒಂದುಕಡೆಯಾದ್ರೆ, ಈಕೆಯ ಅಂದಕ್ಕೆ ಮಾರುಹೋದವರೇ ಹೆಚ್ಚು.

ಇನ್ನು ಸ್ಮೃತಿ ಮಂಧಾನ ತನ್ನ ತಾಳ್ಮೆ ಕಳೆದುಕೊಂಡು ಕೋಪ ಮಾಡಿಕೊಂಡಿದ್ದು ಎಂದಾದರೂ ಕಂಡಿದ್ದೀರಾ?

ಈ ಫೋಟೋವನ್ನು ನೋಡಿ, ಪಂದ್ಯವೊಂದರ ಮಧ್ಯೆ ಕೋಪಗೊಂಡ ಸ್ಮೃತಿ ಅವರ ಫೋಟೋ ಇದು.

ಕೋಪಗೊಂಡರೂ ಸಹ ಸ್ಮೃತಿ ಎಷ್ಟೊಂದು ಮುದ್ದಾಗಿ ಕಾಣಿಸುತ್ತಾರೆ. ಅಲ್ಲವೇ?

ZEENEWS TRENDING STORIES

By continuing to use the site, you agree to the use of cookies. You can find out more by Tapping this link