ಮನೆಯಲ್ಲಿ ರಾತ್ರಿಯಿಡೀ WiFi ರೂಟರ್ ಆನ್ ಇರುತ್ತಾ? ಇದು ಎಷ್ಟು ಅಪಾಯಕಾರಿ ಗೊತ್ತಾ?

Tue, 08 Aug 2023-9:46 am,

ಪ್ರಸ್ತುತ, ವರ್ಕ್ ಫ್ರಮ್ ಹೋಂ ನಿಂದ ಹಿಡಿದು ಆನ್ಲೈನ್ ಕ್ಲಾಸ್ ವರೆಗೆ ವೈ-ಫೈ ಬೇಕೇ ಬೇಕು. ಆದರೆ, ನೀವು ರಾತ್ರಿ ವೇಳೆ ಮಲಗುವ ಮೊದಲು ಇದನ್ನು ಆಫ್ ಮಾಡಿ ಇಡುವುದು ಕೂಡ ಅಗತ್ಯ. ವಾಸ್ತವವಾಗಿ, ವೈ-ಫೈ ಬಳಸುವ ಹೆಚ್ಚಿನ ಮಂದಿ ಸದಾ ಅದನ್ನು ಆನ್ ಮಾಡಿಯೇ ಇಟ್ಟಿರುತ್ತಾರೆ. ಆದರೆ, ವೈಫೈ ರೂಟರ್ ಅನ್ನು ಸ್ವಿಚ್ ಆಫ್ ಮಾಡದೆ ಹಾಗೆ ಮಲಗುವುದು ಎಷ್ಟರ ಮಟ್ಟಿಗೆ ಸರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮನೆಯಲ್ಲಿ ಇಡೀ ರಾತ್ರಿ ವೈ-ಫೈ ಆನ್ ಇರುವುದರಿಂದ ಅದು ಹೇಗೆ ಅಪಾಯಕಾರಿ ಆಗಬಹುದು ಎಂದು ತಿಳಿಯೋಣ... 

ನೀವು ಭವಿಷ್ಯದಲ್ಲಿ ವಿದ್ಯುತ್ಕಾಂತೀಯ ವಿಕಿರಣದಿಂದ ಉಂಟಾಗುವ ಕಾಯಿಲೆಗಳ ಅಪಾಯದಿಂದ ದೂರ ಉಳಿಯಲು ಬಯಸಿದರೆ ರಾತ್ರಿ ಮಲಗುವ ಮೊದಲು ತಪ್ಪದೆ ನಿಮ್ಮ ಮನೆಯ ವೈ-ಫೈ ರೂಟರ್ ಅನ್ನು ಆಫ್ ಮಾಡಿ. 

ವಾಸ್ತವವಾಗಿ, ನೀವು ಇಡೀ ರಾತ್ರಿ ವೈಫೈ ರೂಟರ್ ಆನ್  ಇತ್ತು ಮಲಗುವುದರಿಂದ ವಿದ್ಯುತ್ಕಾಂತೀಯ ವಿಕಿರಣದಿಂದಾಗಿ ಕೆಲವು ಕಾಯಿಲೆಗಳು ನಿಮ್ಮ ದೇಹದಲ್ಲಿ ಉದ್ಭವಿಸಬಹುದು. ಇದು ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರಬಹುದು. 

ವೈಫೈ ರೂಟರ್ ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿದ್ದರೆ,  ವೈ-ಫೈ  ರೂಟರ್‌ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣಗಳು ದೇಹಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ತಕ್ಷಣಕ್ಕೆ ನಿಮಗೆ ಇದರ ಅನುಭವವಾಗುವುದಿಲ್ಲ, ಆದರೆ, ಭವಿಷ್ಯದಲ್ಲಿ ಇದರಿಂದ ಖಂಡಿತ ತೊಂದರೆ ಉಂಟಾಗಬಹುದು.   

ಒಂದೊಮ್ಮೆ ನೀವು ವೈಫೈ ರೂಟರ್ ಅಳವಡಿಸಿರುವ ಸ್ಥಳದ ಸಮೀಪದಲ್ಲೇ ಮಲಗುತ್ತಿದ್ದರೆ ಮತ್ತು ರಾತ್ರಿ ವೇಳೆ ವೈ-ಫೈ ರೂಟರ್ ಅನ್ನು ಆಫ್ ಮಾಡದೆ ಚಾಲನೆಯಲ್ಲಿಟ್ಟಿದ್ದರೆ ಅದು ನಿಮಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು. ವಾಸ್ತವವಾಗಿ, ವೈಫೈ ರೂಟರ್ ಚಾಲನೆಯಿಂದ ಹೊರಬರುವ ವಿಕಿರಣಗಳು ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಈ ನಿದ್ರಾಹೀನತೆ ಸಮಸ್ಯೆಯು ಕಾಲಾನಂತರದಲ್ಲಿ ಹಲವು ಗಂಭೀರ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಇದನ್ನು ತಪ್ಪಿಸಲು ರಾತ್ರಿ ವೇಳೆ ನಿಮ್ಮ ಮನೆಯ ವೈ-ಫೈ ರೂಟರ್ ಅನ್ನು ಆಫ್ ಮಾಡಿ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link