ಈ ದೇಶದಲ್ಲಿ ನಾಯಿ-ಬೆಕ್ಕುಗಳೂ ಕೂಡ ಕೆಲಸಕ್ಕೆ ಹೋಗುತ್ತವೆ..! ಅಷ್ಟಕ್ಕೂ ಅವು ಪಡೆಯುವ ಸಂಬಳ ಎಷ್ಟು ಗೊತ್ತಾ..? ಕೇಳಿದ್ರೆ ಶಾಕ್ ಆಗ್ತೀರ
Viral news: ಪ್ರಾಣಿಗಳು ಕೆಲಸಕ್ಕೆ ಹೋಗುತ್ತವೆ ಎಂದರೆ ನೀವು ನಂಬುತ್ತೀರಾ? ಈ ದೇಶದಲ್ಲಿ ನಾಯಿ ಬೆಕ್ಕುಗಳು ಕೂಡ ಕೆಲಸಕ್ಕೆ ಹೋಗುತ್ತವೆ. ನೀವು ಇದನ್ನು ನಂಬಲು ಅಸಾಧ್ಯ ಎನಿಸಿದರೂ ಕೂಡ ಇದುವೇ ಸತ್ಯ. ಇಲ್ಲಿನ ನಾಯಿ ಬೆಕ್ಕುಗಳು ಸುಮ್ಮನೆ ಏನೂ ಕೆಲಸಕ್ಕೆ ಹೋಗಲ್ಲ, ಅವು ಮಾಡುವ ಕೆಲಸಕ್ಕೆ ಸಂಬಳವನ್ನು ಕೂಡ ಪಡೆದುಕೊಳ್ಳುತ್ತವೆ.
ಅನೇಕ ಜನರು ನಾಯಿ ಮತ್ತು ಬೆಕ್ಕುಗಳನ್ನು ಇಷ್ಟಪಡುತ್ತಾರೆ, ಮೆನಯಲ್ಲಿ ಅವುಗಳನ್ನು ತಂದು ಸಾಕುತ್ತಾರೆ,ಅಷ್ಟೆ ಏಕೆ ಚಿಕ್ಕ ಮಗುವಿನಂತೆ ಅವುಗಳ ಲಾಲನೆ ಪಾಲನೆ ಮಾಡುತ್ತಾರೆ.
ಹೆಚ್ಚಿನ ಜನರು ಪ್ರತಿದಿನ ತಮ್ಮ ಸಾಕುಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾರೆ. ಬೆಳಗ್ಗೆ ಎದ್ದ ಒಡನೆ ಅವುಗಳೊಂದಿಗೆ ಆಟವಾಡುತ್ತಾ ತಮ್ಮ ಸಮಯವನ್ನು ಕಳೆಯುತ್ತಾರೆ. ಜೊತೆಗೆ ತಿಂಡಿ ತಿನ್ನುತ್ತಾರೆ, ಸಾಮಾನ್ಯವಾಗಿ ಮನೆಯಲ್ಲಿ ನಾಯಿಗಳು ತಮ್ಮ ಒಡೆಯ ಹೇಳಿದ ಸಣ್ಣ ಪುಟ್ಟ ಕೆಲಸವನ್ನು ಮಾಡುತ್ತವೆ. ಆದರೆ, ಶ್ವಾನಗಳು ಹಾಗೂ ಬೆಕ್ಕುಗಳು ಕೆಲಸಕ್ಕೆ ಹೋಗಿ ದುಡಿಯುತ್ತವೆ ಎಂದರೆ ನೀವು ನಂಬುತ್ತೀರಾ..?
ಇಲ್ಲೊಂದು ದೇಶದಲ್ಲಿ ನಾಯಿಗಳು ಕೆಲಸಕ್ಕೆ ಹೋಗುತ್ತವೆ. ಮನುಷ್ಯರು ಸುಮ್ಮನೆ ಕುಳಿತಿರುವ ಇಂದಿನ ಜಗತ್ತಿನಲ್ಲಿ ನಾಯಿಗಳು ಕೆಲಸ ಮಾಡುತ್ತವೆ ಎಂದರೆ ನಂಬುವುದು ಕಷ್ಟ. ಆದರೆ ಚೀನಾದಲ್ಲಿ ವಿಚಿತ್ರ ಜೀವನಶೈಲಿ ಟ್ರೆಂಡ್ ನಡೆಯುತ್ತಿದೆ. ಇಲ್ಲಿನ ಜನರು ತಮ್ಮ ಸಾಕುಪ್ರಾಣಿಗಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪಿಇಟಿ ಉದ್ಯೋಗಿಗಳನ್ನು ಕೇಳುವ ಪೋಸ್ಟ್ ವೈರಲ್ ಆಗಿದೆ. ಚೈನೀಸ್ ಕೆಫೆ ಮಾಲೀಕರು ಆರೋಗ್ಯಕರ ಒಳ್ಳೆಯ ಸ್ವಭಾವದ ನಾಯಿ ಮತ್ತು ಬೆಕ್ಕುಗಳನ್ನು ಹುಡುಕುತ್ತಿದ್ದಾರೆ ಎಂಬ ಸುದ್ದಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಸಾಕುಪ್ರಾಣಿಗಳನ್ನು ಕೆಫೆಗಳಲ್ಲಿ ಬಳಸಲಾಗುತ್ತದೆ. ಆದರೆ ಕೆಫೆಗಳಲ್ಲಿ ನಾಯಿ ಅಥವಾ ಬೆಕ್ಕು ಏನು ಮಾಡುತ್ತದೆ ಎಂದು ತಿಳಿದುಕೊಳ್ಳುವ ಕತೂಹಲ ನಿಮಗೂ ಕೂಡ ಇದೆಯಾ?
ನಾಯಿ ಮತ್ತು ಬೆಕ್ಕು ಕೆಫೆಗೆ ಬರುವ ಗ್ರಾಹಕರೊಂದಿಗೆ ಆಟವಾಡುವುದು ಅಥವಾ ಸಂವಹನ ಮಾಡುವುದು ಸಾಕುಪ್ರಾಣಿಗಳ ಕೆಲಸ. ಕೆಫೆಯಲ್ಲಿ ಕೆಲಸ ಮಾಡುವ ಪ್ರಾಣಿಗಳಿಗೂ ಸಂಬಳ ನೀಡಲಾಗುತ್ತದೆ. ಈ ಸಾಕುಪ್ರಾಣಿಗಳು ಗಳಿಸಿದ ಹಣವನ್ನು ಮಾಲೀಕರು ಅವುಗಳನ್ನು ಆಹಾರವನ್ನು ಖರೀದಿಸಲು ಬಳಸುತ್ತಾರೆ.
ಜೇನ್ ಕ್ಸು, 27 ವರ್ಷದ ಪಿಎಚ್‌ಡಿ ವಿದ್ಯಾರ್ಥಿನಿ, ತನ್ನ ಎರಡು ವರ್ಷದ ಸಮೋಯ್ಡ್‌ನನ್ನು ಪೂಜೆ ಡಾಗ್ ಕೆಫೆಯಲ್ಲಿ ಕೆಲಸ ಮಾಡಲು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.