Garuda Purana: ಈ 5 ಕೆಲಸ ಮಾಡಿದ್ರೆ ಆಯಸ್ಸು ಕಮ್ಮಿಯಾಗುತ್ತದೆ, ಗರುಡ ಪುರಾಣ ಈ ಕುರಿತು ಹೇಳುವುದೇನು?

Sun, 10 Apr 2022-4:52 pm,

1. ತಡವಾಗಿ ಏಳುವುದರಿಂದ ಆಯಸ್ಸು ಕಮ್ಮಿಯಾಗುತ್ತದೆ - ಗರುಡ ಪುರಾಣದ ಪ್ರಕಾರ ಬೆಳಗ್ಗೆ ತಡವಾಗಿ ಏಳುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ವಾಸ್ತವದಲ್ಲಿ ಬೆಳಗ್ಗೆ  ಗಾಳಿಯು ಶುದ್ಧವಾಗಿರುತ್ತದೆ. ಅದು ಹಲವು ರೋಗಗಳನ್ನು ಗುಣಪಡಿಸುತ್ತದೆ. ತಡವಾಗಿ ಎದ್ದ ನಂತರ ದೇಹದ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.

2, ರಾತ್ರಿ ಹೊತ್ತು ಮೊಸರನ್ನು ಸೇವಿಸಬಾರದು - ಗರುಡ ಪುರಾಣದ ಪ್ರಕಾರ ರಾತ್ರಿ ವೇಳೆ ಮೊಸರನ್ನು ಸೇವಿಸಬಾರದು. ಮೊಸರು ತಂಪು ಗುಣಧರ್ಮ ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಇದನ್ನು ಸೇವಿಸುವುದರಿಂದ ಹಲವಾರು ರೋಗಗಳು ಬರುವ ಸಾಧ್ಯತೆ ಇರುತ್ತದೆ. ಇದು ವಯಸ್ಸಿನ ಮೇಲೂ ಕೂಡ ಪರಿಣಾಮ ಬೀರುತ್ತದೆ.

3. ಸ್ಮಶಾನದ ಹೊಗೆಯಿಂದ ದೂರವಿರಿ - ಶವಸಂಸ್ಕಾರದ ಸಮಯದಲ್ಲಿ, ಸತ್ತವರ ದೇಹದಿಂದ ಅನೇಕ ರೀತಿಯ ಹಾನಿಕಾರಕ ವಸ್ತುಗಳು ಹೊರಬರುತ್ತವೆ. ಸತ್ತ ವ್ಯಕ್ತಿಯ ದೇಹವನ್ನು ಸುಟ್ಟಾಗ, ಕೆಲವು ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಮೃತದೇಹದೊಂದಿಗೆ ನಾಶವಾಗುತ್ತವೆ ಮತ್ತು ಕೆಲವು ಹೊಗೆಯೊಂದಿಗೆ ವಾತಾವರಣದಲ್ಲಿ ಹರಡುತ್ತವೆ. ಒಬ್ಬ ವ್ಯಕ್ತಿಯು ಆ ಹೊಗೆಯ ಸಂಪರ್ಕಕ್ಕೆ ಬಂದಾಗ, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಅವನ ದೇಹಕ್ಕೆ ಅಂಟಿಕೊಳ್ಳುತ್ತವೆ ಮತ್ತು ಅನೇಕ ರೀತಿಯ ರೋಗಗಳನ್ನು ಹರಡುತ್ತವೆ. ಆ ಕಾಯಿಲೆಗಳಿಂದಾಗಿ ವ್ಯಕ್ತಿಯ ವಯಸ್ಸು ಕಡಿಮೆಯಾಗಬಹುದು.

4. ಬೆಳಗ್ಗೆ  ಶಾರೀರಿಕ ಸಂಬಂಧ ಬೆಳೆಸಬಾರರು - ಗರುಡ ಪುರಾಣದ ಪ್ರಕಾರ, ಬೆಳಗ್ಗೆ ದೈಹಿಕ ಸಂಬಂಧ ಬೆಸೆಯಬಾರದು. ಅದರಲ್ಲೂ ಬ್ರಹ್ಮ ಮುಹೂರ್ತದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಯಸ್ಸು ಕಡಿಮೆಯಾಗುತ್ತದೆ.

5. ಒಣ ಮತ್ತು ಹಳಸಿದ ಮಾಂಸ ಸೇವಿಸಬಾರದು - ಒಣ ಮತ್ತು ಹಳಸಿದ ಮಾಂಸವು ಯಾವುದೇ ಮನುಷ್ಯನಿಗೆ ಹಾನಿಕಾರಕವಾಗಿದೆ. ಒಣ ಮತ್ತು ಹಳಸಿದ ಮಾಂಸವನ್ನು ತಿನ್ನುವುದರಿಂದ ಕ್ಯಾನ್ಸರ್ ನಂತಹ ಕಾಯಿಲೆಗಳು ಬರುತ್ತವೆ. ಹಳಸಿದ ಮಾಂಸದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರುತ್ತವೆ ಮತ್ತು ಅವು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link