ಡೊನಾಲ್ಡ್ ಟ್ರಂಪ್ ಉದ್ಘಾಟಿಸಲಿದ್ದಾರೆ ವಿಶ್ವದ ಈ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ

Wed, 19 Feb 2020-7:53 pm,

ಈ ಸ್ಟೇಡಿಯಂನ ಪಾರ್ಕಿಂಗ್ ವ್ಯವಸ್ಥೆ ಕೂಡ ತುಂಬಾ ವಿಶಾಲವಾಗಿದೆ. ಇದರಲ್ಲಿ ನೀವು 3000 ಕಾರ್ ಹಾಗೂ ಸುಮಾರು 10,000 ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ. ಇಲ್ಲಿ ಸ್ಕೈವಾಕ್ ಕೂಡ ನಿರ್ಮಿಸಲಾಗಿದ್ದು, ಅದನ್ನು ಬಳಸಿ ಪ್ರೇಕ್ಷಕರು ಮೆಟ್ರೋ ಸ್ಟೇಷನ್ ನಿಂದ ನೇರವಾಗಿ ಸ್ಟೇಡಿಯಂಗೆ  ಪ್ರವೇಶಿಸಬಹುದು.

ಸರ್ದಾರ್ ಪಟೇಲ್ ಸ್ಟೇಡಿಯಂನ ವಿಶೇಷತೆ ಏನೆಂದರೆ, ಆಟದ ವೇಳೆ ಬೀಳುವ ಆಕಸ್ಮಿಕ ಮಳೆಯ ಬಳಿಕ ಕೇವಲ ಅರ್ಧ ಗಂಟೆಯಲ್ಲಿಯೇ ಈ ಮೈದಾನವನ್ನು ಪುನಃ ಆಟಕ್ಕೆ ಸಿದ್ಧಪಡಿಸಬಹುದು.

ಈ ಸ್ಟೇಡಿಯಂನಲ್ಲಿ ಎರಡು ಪ್ರ್ಯಾಕ್ಟಿಸ್  ಗ್ರೌಂಡ್, ಇನ್ಡೋರ್ ಪ್ರ್ಯಾಕ್ಟಿಸ್ ಪಿಚ್, ಬ್ಯಾಡ್ಮಿಂಟನ್-ಟೆನಿಸ್ ಕೋರ್ಟ್, ಸ್ಕಾಸ್ ಎರೆನಾ, ಟೇಬಲ್ ಟೆನ್ನಿಸ್ ಎರೆನಾ, 3D ಪ್ರಾಜೆಕ್ಟರ್ ಥಿಯೇಟರ್ ಹಾಗೂ 53 ಕ್ಯಾಮೇರಾಗಲಿರುವ ಒಂದು ಕ್ಲಬ್ ಹೌಸ್ ಕೂಡ ನಿರ್ಮಿಸಲಾಗಿದೆ.

ಈ ಕ್ರೀಡಾಂಗಣ ಒಟ್ಟು 63 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಈ ಸ್ಟೇಡಿಯಂಗೆ ಒಟ್ಟು ಮೂರು ಪ್ರವೇಶ ದ್ವಾರಗಳಿದ್ದು, 75 ಕಾರ್ಪೋರೆಟ್ ಬಾಕ್ಸ್, 1 ಸ್ವಿಮ್ಮಿಂಗ್ ಪೂಲ್, 4 ಡ್ರೆಸ್ಸಿಂಗ್ ರೂಮ್ ಗಳಿವೆ. ಈ ಸ್ಟೇಡಿಯಂನಲ್ಲಿ ಫ್ಲಡ್ ಲೈಟ್ ಗಳ ಬದಲಾಗಿ LED ದೀಪಗಳನ್ನು ಬಳಸಲಾಗಿದೆ. ಈ LED ಲೈಟ್ ಗಳು ಆಂಟಿ-ಬ್ಯಾಕ್ಟೀರಿಯಲ್ ದೀಪಗಳಾಗಿವೆ. ಅಷ್ಟೇ ಅಲ್ಲ ಇಲ್ಲಿ ಫೈರ್ ಪ್ರೂಫ್ ಕೆನೋಪಿಗಳನ್ನೂ ಸಹ ಅಳವಡಿಸಲಾಗಿದೆ.

ಸರ್ದಾರ್ ವಲ್ಲಭೈ ಪಟೇಲ್ ಹೆಸರಿನ ಈ ಕ್ರೀಡಾಂಗಣದ ಭಾವಚಿತ್ರಗಳನ್ನು ICC ಹಂಚಿಕೊಂಡಿದ್ದು, "ಮೊಟೆರಾ ಕ್ರೀಡಾಂಗಣ ಬಹುತೇಕ ನವನಿರ್ಮಾಣಗೊಂಡಿದ್ದು, ಈ ಕ್ರೀಡಾಂಗಣದ ಹೊಚ್ಚ ಹೊಸ ಫೋಟೋಗಳು ಮತ್ತು ಒಟ್ಟು 1.10ಲಕ್ಷ ಕ್ರೀಡಾಭಿಮಾನಿಗಳು ಏಕಕಾಲಕ್ಕೆ ಕೂರುವ ಕ್ಷಮತೆ ಇದು ಹೊಂದಿದೆ" ಎಂದು ಬರೆದುಕೊಂಡಿದೆ.

ಡಿಸೆಂಬರ್ 2016ರಲ್ಲಿ ಲಾರ್ಸೆನ್ ಅಂಡ್ ಟರ್ಬೋ ಕಂಪನಿ ಈ ಕ್ರೀಡಾಂಗಣದ ಪುನರ್ನಿರ್ಮಾಣದ ಕೆಲಸ ಆರಂಭಿಸಿತ್ತು. ಅಂದು ಈ ಕ್ರೀಡಾಂಗಣದ ನಿರ್ಮಾಣಕ್ಕಾಗಿ 7 ಬಿಲಿಯನ್ ಬಜೆಟ್ ನಿರ್ಧರಿಸಲಾಗಿತ್ತು.

ವರ್ಷ 2015ರಲ್ಲಿ ಈ ಸ್ಟೇಡಿಯಂನ ಪುನರ್ನಿರ್ಮಾಣದ ಕಾರ್ಯ ಆರಂಭಗೊಂಡಿತ್ತು. ಇದೇ ಸಂದರ್ಭದಲ್ಲಿ ಈ ಕ್ರೀಡಾಂಗಣದ ಹೆಸರನ್ನು ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಪುನರ್ನಾಮಕರಣ ಮಾಡಲಾಗಿದೆ. ಈ ಸ್ಟೇಡಿಯಂ ಅನ್ನು ಧ್ವಂಸಗೊಳಿಸಿ, ಮತ್ತೊಮ್ಮೆ ಕಟ್ಟಡ ಕಾಮಗಾರಿ ಆರಂಭಿಸಲಾಯಿತು. ಕಳೆದ ವರ್ಷವೇ ಈ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದೆ, ಆದರೆ, ತನ್ನ ನಿರ್ಧಾರಿತ ಒಂದು ವರ್ಷದ ಬಳಿಕ ಇದು ಸಿದ್ಧಗೊಂಡಿದೆ.

ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಿರ್ಮಾಣಗೊಂಡ ಈ ಕ್ರೀಡಾಂಗಣಕ್ಕೆ ಸರ್ದಾರ್ ಪಟೇಲ್ ಸ್ಟೇಡಿಯಂ ಎಂದು ಹೆಸರಿಸಲಾಗಿದೆ. ಮೊದಲು ಇದು ಮೊಟೆರಾ ಸ್ಟೇಡಿಯಂ ಹೆಸರಿನಿಂದ ಕರೆಯಲ್ಪಡುತ್ತಿತ್ತು ಹಾಗೂ ಇದು ಸುಮಾರು 49 ಸಾವಿರ ಪ್ರೇಕ್ಷಕರ ಕ್ಷಮತೆ ಹೊಂದಿತ್ತು. 1982ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. ಸಾಬರಮತಿ ನದಿಯ ಕಡಲು ತೀರದಲ್ಲಿ ನಿರ್ಮಾಣಗೊಂಡಿದ್ದ ಈ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಅಂದಿನ ಗುಜರಾತ್ ಸರ್ಕಾರ ಸುಮಾರು 50ಕೋಟಿ ರೂ.ಹಣ ವೆಚ್ಚ ಮಾಡಿತ್ತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link