Deepavali Daan: ದೀಪಾವಳಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಇವುಗಳನ್ನು ದಾನ ಮಾಡಿದರೆ ಸಿರಿ-ಸಂಪತ್ತು ಪ್ರಾಪ್ತಿ
ಬೆಳಕಿನ ಹಬ್ಬ ದೀಪಾವಳಿಯಲ್ಲಿ ದ್ವಾದಶ ರಾಶಿಯವರು ತಮ್ಮ ತಮ್ಮ ರಾಶಿಗೆ ತಕ್ಕಂತೆ ಕೆಲವು ವಸ್ತುಗಳನ್ನು ದಾನ ಮಾಡುವುದನ್ನು ತುಂಬಾ ಮಂಗಳಕರ ಎಂದು ಹೇಳಲಾಗುತ್ತದೆ. ನಿಮ್ಮ ರಾಶಿಗೆ ಅನುಗುಣವಾಗಿ ಯಾವ ವಸ್ತುಗಳನ್ನು ದಾನ ಮಾಡುವುದು ಶುಭ ಎಂದು ನೋಡುವುದಾದರೆ...
ಮೇಷ ರಾಶಿಯವರು ಇಂದು ಸಕ್ಕರೆ ಅಥವಾ ಸಕ್ಕರೆಯಿಂದ ತಯಾರಿಸಿದ ಸಿಹಿಯನ್ನು ದಾನ ಮಾಡಬೇಕು.
ವೃಷಭ ರಾಶಿಯವರಿಗೆ ಇಂದು ಹಸಿರು ಕಾಳುಗಳನ್ನು ಬಡವರಿಗೆ ದಾನ ಮಾಡುವುದರಿಂದ ಒಳಿತಾಗಲಿದೆ.
ಮಿಥುನ ರಾಶಿಯವರು ಇಂದು ಅಗತ್ಯವಿರುವವರಿಗೆ ಬೆಲ್ಲ ದಾನ ಮಾಡಿ.
ಕರ್ಕಾಟಕ ರಾಶಿಯವರು ಇಂದು ಅಕ್ಕಿ ಸೇರಿದಂತೆ ನಿಮ್ಮ ಶಕ್ತಿಗೆ ತಕ್ಕಂತೆ ಆಹಾರ ಧಾನ್ಯಗಳನ್ನು ದಾನ ಮಾಡಬೇಕು.
ಸಿಂಹ ರಾಶಿಯವರು ಇಂದು ಅಗತ್ಯವಿದ್ದವರಿಗೆ ಉಡುಪು ದಾನ ಮಾಡಿರಿ.
ಕನ್ಯಾ ರಾಶಿಯ ಜನರು ದೀಪಾವಳಿ ಪೂಜೆಯ ಬಳಿಕ ಸಕ್ಕರೆಯಿಂದ ತಯಾರಿಸಿದ ಸಿಹಿ ತಿನಿಸುಗಳನ್ನು ಬಡವರಿಗೆ ನೀಡಿ.
ತುಲಾ ರಾಶಿಯವರು ಇಂದು ಪುಸ್ತಕಗಳನ್ನು ದಾನ ಮಾಡುವುದರಿಂದ ಒಳ್ಳೆಯದಾಗಲಿದೆ.
ವೃಶ್ಚಿಕ ರಾಶಿಯವರು ಇಂದು ತೊಗರಿಬೇಳೆಯೊಂದಿಗೆ ಬೆಲ್ಲವನ್ನು ದಾನ ಮಾಡುವುದರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಧನು ರಾಶಿಯವರು ಇಂದು ಅಗತ್ಯವಿದ್ದವರಿಗೆ ಕಬ್ಬಿಣ, ಇಲ್ಲವೇ ಕಬ್ಬಿನದಿಂದ ತಯಾರಿಸಿದ ವಸ್ತುಗಳನ್ನು ದಾನವಾಗಿ ನೀಡಿ.
ಮಕರ ರಾಶಿಯವರು ಈ ದಿನ ಕೊತ್ತಂಬರಿ ಸೊಪ್ಪನ್ನು ದಾನ ಮಾಡುವುದರಿಂದ ಶುಭವಾಗಲಿದೆ.
ಕುಂಭ ರಾಶಿಯವರು ಇಂದು ದುರ್ಗಾ ದೇವಾಲಯಕ್ಕೆ ಭೇಟಿ ನೀಡಿ ತಾಯಿಗೆ ಕೆಂಪು ಗುಲಾಬಿ ಹೂವುಗಳನ್ನು ಅರ್ಪಿಸಿ.
ಮೀನ ರಾಶಿಯ ಜನರು ಇಂದು ಅಗತ್ಯ ಇರುವವರಿಗೆ ಕಂಬಳಿಯನ್ನು ದಾನವಾಗಿ ನೀಡಿದರೆ ಶುಭವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.