ಶ್ರಾವಣ ಮಾಸದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ ಪ್ರಾಪ್ತಿಯಾಗುವುದು ಶಿವನ ವಿಶೇಷ ಕೃಪೆ
ಹೊಸ ಮತ್ತು ಹಳೆಯ ವಸ್ತ್ರಗಳ ದಾನ: ವಸ್ತ್ರದಾನವೂ ಬಹಳ ಮುಖ್ಯ ದಾನವಗಿದೆ. ಆಯುಷ್ಯವನ್ನು ಹೆಚ್ಚಿಸಲು ವಸ್ತ್ರಗಳನ್ನು ದಾನ ಮಾಡಲಾಗುತ್ತದೆ ಎಂದು ನಂಬಲಾಗಿದೆ. ಹೊಸ ಬಟ್ಟೆಗಳನ್ನು ದಾನ ಮಾಡುತ್ತಿದ್ದರೆ, ಜ್ಯೋತಿಷಿಗಳಿಂದ ಸಲಹೆಯನ್ನು ತೆಗೆದುಕೊಳ್ಳಿ. ಅದೇ ಹಳೆಯ ಬಟ್ಟೆಗಳನ್ನು ದಾನ ಮಾಡುವುದಾದರೆ ಅವುಗಳನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.
ರುದ್ರಾಕ್ಷಿ ದಾನ: ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶ್ರಾವಣದಲ್ಲಿ ರುದ್ರಾಕ್ಷಿಯ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ಶ್ರಾವಣದಲ್ಲಿ ರುದ್ರಾಕ್ಷಿಯನ್ನು ದಾನ ಮಾಡುವುದರಿಂದ ತಿಳಿದೋ ತಿಳಿಯದೆಯೋ ಮಾಡಿದ ಪಾಪಗಳು ದೂರವಾಗುತ್ತವೆ.
ತುಪ್ಪ ದಾನ: ದಾನದ ಪ್ರಕಾರ ತುಪ್ಪವನ್ನು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ಕಂಡುಬರುತ್ತವೆ. ಶಿವನಿಗೆ ತುಪ್ಪದ ಅಭಿಷೇಕವೂ ಮಂಗಳಕರ ಎಂಬ ನಂಬಿಕೆಯಿದೆ. ತುಪ್ಪವನ್ನು ದಾನ ಮಾಡಿದರೆ ರೋಗಗಳು ದೂರವಾಗುತ್ತವೆ.
ಕಪ್ಪು ಎಳ್ಳು: ಶ್ರಾವಣದಲ್ಲಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ರಾಹು-ಕೇತು ಮತ್ತು ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಬಹುದು. ವಿಶೇಷವಾಗಿ ಶನಿಯ ಸಾಡೇ ಸಾತಿ , ಧೈಯ್ಯಾದಿಂದ ತೊಂದರೆಗೊಳಗಾದವರು ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಬೇಕು. ಮತ್ತು ಕಪ್ಪು ಎಳ್ಳನ್ನು ಬಡವರಿಗೆ ದಾನ ಮಾಡಿ.
ಉಪ್ಪು: ಹಿಂದೂ ಧರ್ಮದಲ್ಲಿ ಉಪ್ಪಿನ ವಿಶೇಷ ಮಹತ್ವವನ್ನು ಹೇಳಲಾಗಿದೆ. ದಾನದಲ್ಲಿಯೂ ಇದು ವಿಶೇಷ ಮಹತ್ವವನ್ನು ಹೊಂದಿದೆ.ಉಪ್ಪನ್ನು ಧನಾತ್ಮಕ ಶಕ್ತಿಯ ಸಂಕೇತವೆಂದು ನಂಬಲಾಗಿದೆ. ಬಡವರಿಗೆ ಉಪ್ಪು ದಾನ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.