ಈ ವಸ್ತುಗಳನ್ನು ಯಾರಿಗೂ ತಿಳಿಯದಂತೆ ದಾನ ಮಾಡಿದರೆ ಬೆಳಗುತ್ತದೆ ಭಾಗ್ಯ

Tue, 14 Jun 2022-11:56 am,

ಬೇಸಿಗೆ ಕಾಲದಲ್ಲಿ ನೀರು ದಾನ ಮಾಡುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ನೀರು ಅಥವಾ ತಂಪು ಪಾನೀಯಗಳಿಂದ ತುಂಬಿದ ಹೂಜಿಗಳನ್ನು ದಾನ ಮಾಡಿ. ಅಗತ್ಯ ಇರುವವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ.  ಹಾಗೆ ಮಾಡುವುದು ಬಹಳ ಲಾಭದಾಯಕವಾಗಲಿದೆ ಎಂದು ಹೇಳಲಾಗಿದೆ.  

 ಹಣ್ಣುಗಳನ್ನು ದಾನ ಮಾಡುವುದರಿಂದ ಸಾಕಷ್ಟು ಪುಣ್ಯ ಸಿಗುತ್ತದೆ. ಮಕ್ಕಳನ್ನು ಹೊಂದಲು ಬಯಸುವವರು ಬೇಸಿಗೆ ಋತುವಿನಲ್ಲಿ ಜ್ಯೂಸ್ ಇರುವ ಹಣ್ಣುಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ದಾನ ಮಾಡುವಾಗ ಯಾವಾಗಲೂ  ಇಡಿ ಹಣ್ಣುಗಳನ್ನು ದಾನ ಮಾಡಿ.  ಹಣ್ಣುಗಳನ್ನು ಕತ್ತರಿಸಿ ಯಾರಿಗೂ ಕೊಡಬೇಡಿ. ಇದರಿನದ ದಾನದ ಫಲ ಸಿಗುವುದಿಲ್ಲ ಎಂದು ಹೇಳಲಾಗುತ್ತದೆ.    

ಜಾತಕದಲ್ಲಿ ಸೂರ್ಯನು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾನೆ. ಗೌರವ ಹೆಚ್ಚುತ್ತದೆ. ಬೆಲ್ಲವನ್ನು ದಾನ ಮಾಡುವುದು ಜಾತಕದಲ್ಲಿ ಸೂರ್ಯನನ್ನು ಬಲಪಡಿಸಲು ಉತ್ತಮ ಮಾರ್ಗವಾಗಿದೆ. 

ಮೊಸರು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವುದು ಸೂಕ್ತ. ಇದರೊಂದಿಗೆ ಈ ಋತುವಿನಲ್ಲಿ ಸಿಹಿ ಮೊಸರನ್ನು ದಾನ ಮಾಡುವುದರಿಂದ ಜಾತಕದಲ್ಲಿ ಶುಕ್ರ ಗ್ರಹವು ಬಲಗೊಳ್ಳುತ್ತದೆ.

ಬೇಸಿಗೆಯಲ್ಲಿ ಕಡಲೆ ಹಿಟ್ಟು ದಾನ ಮಾಡುವುದು ಕೂಡಾ ತುಂಬಾ ಪುಣ್ಯವೆಂದು ಪರಿಗಣಿಸಲಾಗಿದೆ. ಇದು ಜಾತಕದಲ್ಲಿ ಗುರುವನ್ನು ಬಲಪಡಿಸುತ್ತದೆ ಮತ್ತು ಅದೃಷ್ಟವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಲೇಖನವು ಮಾಹಿತಿಯು ಸಾಮಾನ್ಯ ನಂಬಿಕೆ  ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link