Things To do not Donate: ಈ ವಸ್ತುಗಳನ್ನು ಎಂದಿಗೂ ದಾನ ಮಾಡಲೇಬಾರದು

Mon, 13 Jun 2022-7:27 am,

ಧಾರ್ಮಿಕ ಪುಸ್ತಕಗಳು ಅಥವಾ ಪಠ್ಯಗಳನ್ನು ಓದಲು ಆಸಕ್ತಿಯಿಲ್ಲದ ಜನರಿಗೆ ಎಂದಿಗೂ ದಾನ ಮಾಡಬೇಡಿ. ಅಂತಹ ಜನರು ಈ ಪುಸ್ತಕಗಳನ್ನು ಗೌರವಿಸುವುದಿಲ್ಲ. ಅಂತಹ ದಾನವು ಪಾಪವನ್ನು ಉಂಟುಮಾಡುತ್ತದೆ. 

ಅನ್ನ ಅಥವಾ ಅನ್ನದಾನ ಮಾಡುವುದು ಅತ್ಯಂತ ಶುಭ ಎನ್ನಲಾಗುತ್ತದೆ.  ಆದರೆ ಉಳಿದ ಆಹಾರವನ್ನು ಅಂದರೆ ತಂಗಳು ಆಹಾರವನ್ನು ಯಾರಿಗಾದರೂ ನೀಡುವುದು ತುಂಬಾ ತಪ್ಪು. ಉಳಿದ ಅನ್ನವನ್ನು ದಾನ ಮಾಡುವುದು ತಾಯಿ ಅನ್ನಪೂರ್ಣೆಗೆ ಮಾಡಿದ ಅವಮಾನ, ಇದರಿಂದ ತಾಯಿ ಕೋಪಗೊಳ್ಳುತ್ತಾಳೆ.   

ಸಂಧ್ಯಾಕಾಲದಲ್ಲಿ ಉಪ್ಪನ್ನು ದಾನ ಮಾಡುವುದರಿಂದ ವ್ಯಕ್ತಿಯು ಬಡವನಾಗುತ್ತಾನೆ. ಇದರ ಹೊರತಾಗಿ ಮೊಸರು-ಹುಣಸೆಹಣ್ಣು ಮುಂತಾದ ಹುಳಿ ಪದಾರ್ಥಗಳನ್ನು ಸಂಜೆ ದಾನ ಮಾಡಬಾರದು. 

ತಾಯಿ ಲಕ್ಷ್ಮಿಯ ವಿಗ್ರಹ ಅಥವಾ ಚಿತ್ರವನ್ನು ಯಾರಿಗೂ ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಲಕ್ಷ್ಮಿ ಮತ್ತೊಬ್ಬರ ಮನೆಗೆ ಹೋಗುತ್ತಾಳೆ. ಇದು ಬಡತನಕ್ಕೆ ಕಾರಣವಾಗಬಹುದು. ಅಲ್ಲದೆ, ಲಕ್ಷ್ಮಿ-ಗಣೇಶ ನಾಣ್ಯಗಳನ್ನು ಯಾರಿಗೂ ಉಡುಗೊರೆಯಾಗಿ ನೀಡಬೇಡಿ, ದಾನ ಮಾಡಬೇಡಿ. 

ಒಡೆದ ಸ್ಟೀಲ್ ಪಾತ್ರೆಗಳನ್ನು ಅಥವಾ ಕಬ್ಬಿಣದ ವಸ್ತುಗಳನ್ನು ಯಾರಿಗೂ ದಾನ ಮಾಡಬೇಡಿ. ಮುರಿದ ವಸ್ತುಗಳನ್ನು ದಾನ ಮಾಡುವುದರಿಂದ ಶನಿಯು ಕೋಪಗೊಳ್ಳುತ್ತಾನೆ. ಶನಿದೇವನ ಅತೃಪ್ತಿ ಜೀವನದ ಮೇಲೆ ಭಾರವಾಗಿರುತ್ತದೆ ಎನ್ನಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link