ನೀವು ಮಾಡುವ ಈ ಐದು ತಪ್ಪುಗಳಿಂದ ಲಕ್ಷ್ಮೀ ದೇವಿ ಮುನಿಸಿಕೊಳ್ಳಬಹುದು..!
ಈಗ ಎಲ್ಲರ ಜೀವನಶೈಲಿಯೇ ಬದಲಾಗಿದೆ. ತಡರಾತ್ರಿವರೆಗೆ ಎಚ್ಚರದಿಂದ ಇರುವುದು, ಬೆಳಿಗ್ಗೆ ಬಹಳ ಹೊತ್ತಿನವರೆಗೆ ಮಲಗಿಕೊಂಡಿರುವುದು. ಆದರೆ ಇದು ತಪ್ಪು, ಮುಂಜಾನೆ ಸೂರ್ಯೋದಯಕ್ಕೆ ಮುನ್ನವೇ ಏಳುವುದು ಒಳ್ಳೆಯದು ಎನ್ನುತ್ತದೆ ಶಾಸ್ತ್ರ ಪುರಾಣ.. ಸೂರ್ಯೋದಯದ ನಂತರವೂ ಮಲಗಿಕೊಂಡಿರುವುದು ಲಕ್ಷ್ಮೀಗೆ ಹಿಡಿಸುವುದಿಲ್ಲವಂತೆ. ಹಗೆಯೇ ಮುಸ್ಸಂಜೆ ಹೊತ್ತು ಲಕ್ಷ್ಮೀ ಗೃಹ ಪ್ರವೇಶ ಮಾಡುವ ಹೊತ್ತು ಆಗಲೂ ಮಲಗಿರುವುದು ಲಕ್ಷ್ಮೀಗೆ ಇಷ್ಟವಾಗುವುದಿಲ್ಲವಂತೆ.
ಅನೇಕ ಜನರು ತಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ ಕೆಲವು ಕೆಲಸ ಮಾಡಲು ಹೊತ್ತು ನೋಡುವುದೇ ಇಲ್ಲ, ರಾತ್ರಿ ವೇಳೆ ಉಗುರು ಕತ್ತರಿಸುವುದು ಯಾವತ್ತಿಗೂ ಅಶುಭ. ಹೀಗೆ ಮಾಡಿದರೆ ಲಕ್ಷ್ಮೀ ಮುನಿಸಿಕೊಳ್ಳುತ್ತಾಳಂತೆ. ಈ ಕಾರಣದಿಂದ ಹಣಕಾಸಿನ ಸಮಸ್ಯೆ ಕೂಡಾ ಎದುರಾಗುತ್ತದೆಯಂತೆ.
ಒಮ್ಮೆ ಊಟಕ್ಕೆ ಕುಳಿತರೆ ತಟ್ಟೆಯ ಊಟ ಖಾಲಿಯಾಗುವವರೆಗೆ ಎದ್ದೇಳಬಾರದಂತೆ. ಅರ್ಧದಿಂದ ೂಟ ಬಿಟ್ಟು ಏಳುವುದು ಎಂದರೆ ಅದು ಅನ್ನಕ್ಕೆ ಮಾಡುವ ಅಪಮಾನ. ಅನ್ನ ಅಂದರೆ ಅನ್ನಪೂರ್ಣೆ. ಅನ್ನಪೂರ್ಣೆ ಕೂಡಾ ಲಕ್ಷ್ಮೀಯ ರೂಪ. ಅನ್ನವನ್ನು ಅರ್ಧಕ್ಕೆ ಬಿಟ್ಟು ಏಳುವ ಜನರ ಮನೆಯಲ್ಲಿ ಎಂದಿಗೂ ಏಳಿಗೆ ಕಾಣುವುದಿಲ್ಲವಂತೆ.
ನಿಮ್ಮ ಎಷ್ಟೇ ಒಳ್ಳೆಯ ಸ್ನೇಹಿತರಾಗಿರಲಿ ಅಥವಾ ನಿಮಗೆ ಎಷ್ಟೇ ಬೇಕಾಗಿದ್ದವರಾಗಿರಲಿ ಸಂಜೆಯ ಹೊತ್ತು ಮಾತ್ರ ಉಪ್ಪನ್ನು ಯಾರಿಗೂ ನೀಡಬೇಡಿ. ಸಂಜೆಯ ಹಿಒತ್ತು ಉಪ್ಪನ್ನು ಮನೆಯಿಂದ ಹೊರಗೆ ಕೊಟ್ಟರೆ ಸಾಲದ ಬಾಧೆ ಕಾಡುತ್ತದೆಯಂತೆ.
ರಾತ್ರಿಯಲ್ಲಿ ಊಟ ಮುಗಿಸಿದ ಕೂಡಲೇ ಪಾತ್ರೆಗಳನ್ನು ಶುಚಿಗೊಳಿಸಿ ಇಡಬೇಕು. ಎಂಜಲು ಪಾತ್ರೆಯನ್ನು ಹಾಗೆಯೇ ಬಿಡಬಾರದು. ಇದರಿಂದ ಮನೆಯೊಳಗೆ ನೆಗೆಟಿವ್ ಎನರ್ಜಿ ಹೆಚ್ಚುತ್ತದೆಯಂತೆ. ತಾಯಿ ಲಕ್ಷ್ಮಿ ಕೂಡ ಕೋಪಗೊಳ್ಳುತ್ತಾಳಂತೆ. ಲಕ್ಷ್ಮೀಯ ಕೋಪ ಎಂದರೆ, ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗುತ್ತದೆ