ಅಕ್ಷಯ ತೃತೀಯದ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ; ಲಕ್ಷ್ಮೀ ಮುನಿದುಕೊಳ್ಳುತ್ತಾಳೆ
ಅಕ್ಷಯ ತೃತೀಯದ ದಿನ ಕೆಲವೊಂದು ಕೆಲಸಗಳನ್ನು ಮಾಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಅಕ್ಷಯ ತೃತೀಯದ ದಿನ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ನಾವು ಹೇಳುತ್ತೇವೆ..
ಮನೆ ಶುಚಿಯಾಗಿರಬೇಕು. ಲಕ್ಷ್ಮೀ ದೇವಿ ಸ್ವಚ್ಛತೆಯನ್ನು ಬಹಳವಾಗಿ ಇಷ್ಟಪಡುತ್ತಾಳೆ. ಎಲ್ಲಿ ಸ್ವಚ್ಛತೆ ಇರುವುದಿಲ್ಲವೋ ಅಲ್ಲಿ ಲಕ್ಷ್ಮೀ ವಾಸವಿರುವುದಿಲ್ಲ. ಹಾಗಾಗಿ ಈ ದಿನ ಪೂಜೆಗೆ ಮಹತ್ವ ನೀಡುವಂತೆ ಮನೆಯ ಸ್ವಚ್ಛತೆಯ ಬಗ್ಗೆಯೂ ಗಮನವಿರಲಿ. ಪೂಜಾ ಸ್ಥಳ ಶುಚಿಯಾಗಿರುವುದು ಬಹಳ ಮುಖ್ಯ.
ಈ ದಿನ ಮನೆಯಲ್ಲಿ ಎಲ್ಲರೂ ಸಾಧ್ಯವಾದಷ್ಟು ಪ್ರೀತಿ ಪ್ರೇಮದಿಂದ ಇರಿ. ಕಿರುಚಾಡುವುದು ಅರುಚಾಡುವುದು ಜಗಳವಾಡುವುದು ಇಂತಹ ಕೆಲಸಗಳಿಗೆ ಆಸ್ಪದ ನೀಡಬೇಡಿ. ಮನೆಯಲ್ಲಿ ಕ್ಲೇಷ ಇದ್ದರೆ ಅಲ್ಲಿಯೂ ಲಕ್ಷ್ಮೀ ನೆಲೆಸುವುದಿಲ್ಲ.
ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಅತ್ಯಂತ ಪ್ರಿಯೆ. ಹಲವೆಡೆ ಅಕ್ಷಯ ತೃತೀಯದ ದಿನ ತುಳಸೀಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗಾಗಿ ಅಕ್ಷಯ ತೃತೀಯದ ದಿನ ಸ್ನಾನ ಮಾಡದೆ ತುಳಸಿಯನ್ನು ಮುಟ್ಟಬೇಡಿ. ಅಕ್ಷಯ ತೃತೀಯದ ದಿನ ತುಳಸಿಯ ಎಲೆಯನ್ನು ಕೂಡಾ ಮುರಿಯಬಾರದು.
ಅಕ್ಷಯ ತೃತೀಯ ಬಹಳ ಶುಭ ದಿನ. ಈ ದಿನ ನೀವು ಹೊಸ ಮನೆಯನ್ನು ಖರೀದಿಸಬಹುದು. ಆದರೆ ನೆನಪಿಡಿ, ಈ ದಿನದಂದು ಹೊಸ ಮನೆ ನಿರ್ಮಾಣ ಕಾರ್ಯ ಆರಂಭಿಸಬೇಡಿ. ಅಂದರೆ ಈ ದಿನ ಭೂಮಿ ಅಗೆಯುವ ಕೆಲಸ ಮಾಡಬೇಡಿ
ಅಕ್ಷಯ ತೃತೀಯದ ದಿನ ಮಾಂಸಾಹಾರ ಮದ್ಯಪಾನ ನಿಷೇಧ. ಅಲ್ಲದೆ ಈ ದಿನ ಆಹಾರದಲ್ಲಿ ನೀರುಳ್ಳಿ, ಬೆಳ್ಳುಳ್ಳಿಯ ಸೇವನೆ ಕೂಡಾ ಬೇಡ.