ದೀಪಾವಳಿ ಸಂದರ್ಭದಲ್ಲಿ ಈ ಕೆಲಸ ಮಾಡಿದರೆ ಮುನಿದು ಹೊರ ನಡೆಯುತ್ತಾಳೆ ಲಕ್ಷ್ಮೀ
ಈ ಬಾರಿ ಧನ್ತೇರಸ್ ಹಬ್ಬವನ್ನು ಅಕ್ಟೋಬರ್ 23 ರಂದು ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿಗೆ ಇಷ್ಟವಾದ ವಸ್ತುಗಳನ್ನು ಪೂಜಿಸುವುದರಿಂದ ಮನೆಯಲ್ಲಿ ಸದಾ ಸುಖ ಸಮೃದ್ದಿ ನೆಲೆಯಾಗುತ್ತದೆ. ಧನ್ತೇರಸ್ ದಿನದಂದು ಕುಬೇರ ದೇವ ಮತ್ತು ಧನ್ವಂತರಿ ದೇವನನ್ನು ಪೂಜಿಸಲಾಗುತ್ತದೆ.
ನಿರ್ದಿಷ್ಟ ದಿನ ಅಥವಾ ಪೂಜೆ-ಆಚರಣೆ ಇತ್ಯಾದಿಗಳ ನಂತರ ಮನೆಯನ್ನು ಖಾಲಿ ಬಿಡಬಾರದು ಎಂದು ಹೇಳಲಾಗುತ್ತದೆ. ಧನ್ತೇರಸ್ ದಿನದಿಂದ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಧನ್ತೇರಸ್ ದಿನದಂದು, ಮನೆಯನ್ನು ಖಾಲಿ ಬಿಡಬೇಡಿ. ಅನೇಕ ಬಾರಿ ಜನರು ಈ ದಿನ ಮನೆಗೆ ಬೀಗ ಹಾಕಿಕೊಂಡು ಶಾಪಿಂಗ್‌ಗೆ ಹೋಗುತ್ತಾರೆ.
ಧನ್ತೇರಸ್ ದಿನ ಸಂಜೆ ಯಾವುದೇ ರೀತಿಯ ವಹಿವಾಟು ಮಾಡಬೇಡಿ. ಧನ್ತೇರಸ್ ದಿನವನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಈ ಕಾರಣದಿಂದ ಸಂಜೆ ಯಾವುದೇ ವಹಿವಾಟು ಮಾಡಬೇಡಿ. ಇದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ.
ಲಕ್ಷ್ಮೀ ದೇವಿಗೆ ಬಿಳಿ ಬಣ್ಣವು ತುಂಬಾ ಪ್ರಿಯವಾಗಿದೆ ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಹಾಗಾಗಿ ಲಕ್ಷ್ಮೀ ದೇವಿಯನ್ನು ಮೆಚ್ಚಿಸಲು ಬಿಳಿ ಬಣ್ಣದ ವಸ್ತುಗಳನ್ನು ಮಾತ್ರ ಬಳಸಲಾಗುತ್ತದೆ. ಆದರೆ ಧನ್ತೇರಸ್ ದಿನದಂದು ಸಂಜೆ ಯಾರಿಗೂ ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಗೊಂಡು ಮನೆಯಿಂದ ಹೊರಹೋಗುತ್ತಾಳೆ.