ಶನೈಶ್ಚರ ಅಮವಾಸ್ಯೆಯಾದ ನಾಳೆ ಈ ಕೆಲಸಗಳನ್ನು ಮಾಡಿದರೆ ಎಂದಿಗೂ ಕ್ಷಮಿಸುವುದಿಲ್ಲ ಶನಿ ದೇವ

Fri, 20 Jan 2023-9:01 am,

ಶನೈಶ್ಚರ ಅಮವಾಸ್ಯೆಯ ದಿನ ಮಾಂಸಾಹಾರ-ಮದ್ಯವನ್ನು ಸೇವಿಸಬಾರದು.  ಹೀಗೆ ಮಾಡುವುದರಿಂದ ಶನಿದೇವನಿಗೆ ಕೋಪ ಬರುತ್ತದೆ. ಶನೈಶ್ಚರ  ಅಮಾವಾಸ್ಯೆಯ ದಿನದಂದು  ಸಾತ್ವಿಕ ಆಹಾರ ಸೇವಿಸಬೇಕು.  

ಅಸಹಾಯಕರು, ಬಡವರು, ಅಂಗವಿಕಲರನ್ನು ಎಂದಿಗೂ ಹಿಂಸಿಸಬಾರದು ಅಥವಾ ಶ್ರಮಜೀವಿಗಳನ್ನು ಶೋಷಣೆ ಮಾಡಬಾರದು. ಶನೈಶ್ಚರ  ಅಮಾವಾಸ್ಯೆಯ ದಿನ, ಈ ಅಸಹಾಯಕರನ್ನು ತೊಂದರೆಗೊಳಿಸುವ ತಪ್ಪನ್ನು ಮಾಡಲೇಬಾರದು. ಇದು ಶನಿದೇವನನ್ನು ಕೆರಳಿಸುತ್ತದೆ.    

ಶನಿವಾರದಂದು ಹೊಸ ಚಪ್ಪಲಿ, ಶೂಗಳನ್ನು ಖರೀದಿಸಬಾರದು.ಶನೈಶ್ಚರ  ಅಮಾವಾಸ್ಯೆಯಂದು ಪಾದರಕ್ಷೆಗಳನ್ನು ಖರೀದಿಸುವುದು ಭಾರೀ  ನಷ್ಟವನ್ನು ಉಂಟುಮಾಡುತ್ತದೆ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶನಿದೋಷ ಸೃಷ್ಟಿಯಾಗುತ್ತದೆ. 

ಶನೈಶ್ಚರ ಅಮವಾಸ್ಯೆಯ ದಿನ ಎಣ್ಣೆ, ಕಬ್ಬಿಣವನ್ನು ಕೂಡಾ ಖರೀದಿಸಿ   ತರಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ಬಡತನ  ತಾಂಡವವಾಡುತ್ತದೆ. ಶನೈಶ್ಚರ ಅಮಾವಾಸ್ಯೆಯ ದಿನ ಶನಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಕೂಡಾ ಮನೆಗೆ ತರಬೇಡಿ.   

ಶನೈಶ್ಚರ ಅಮಾವಾಸ್ಯೆಯ ದಿನ ಪುರುಷ ಮತ್ತು ಮಹಿಳೆ ದೈಹಿಕ ಸಂಬಂಧ ಬೆಳೆಸಬಾರದು. ಗರುಡ ಪುರಾಣದ ಪ್ರಕಾರ, ಅಮವಾಸ್ಯೆಯ ದಿನದಂದು ಜನಿಸಿದ ಮಗು ಜೀವನದಲ್ಲಿ ಅನೇಕ ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link