ತೆಳ್ಳಗಾಗಬೇಕು ಎಂದು ಚಿಯಾ ಬೀಜಗಳನ್ನು ಇದರ ಜೊತೆಗೆ ಮಾತ್ರ ಸೇವಿಸಬೇಡಿ! ಸಣ್ಣ ಆಗುವ ಬದಲು ದೇಹ ಊದಿಕೊಳ್ಳುತ್ತಲೇ ಹೋಗುವುದು !
ಹಾಲು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಆದರೆ ಇದನ್ನು ಚಿಯಾ ಬೀಜಗಳೊಂದಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.
ಚಿಯಾ ಬೀಜ ಒಳಗೊಂಡಿರುವ ಒಮೆಗಾ -3 ಮತ್ತು ಫೈಬರ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಸಿಹಿತಿಂಡಿಗಳು, ಬೇಕರಿ ಪದಾರ್ಥಗಳು ಅಥವಾ ಸಕ್ಕರೆ ಪಾನೀಯಗಳಂತಹ ಹೆಚ್ಚಿನ ಸಕ್ಕರೆ ಆಹಾರಗಳೊಂದಿಗೆ ಸೇವಿಸಿದರೆ, ಅದು ಬ್ಲಡ್ ಶುಗರ್ ಜಾಸ್ತಿ ಮಾಡಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ.
ಚಿಯಾ ಬೀಜಗಳು ಉತ್ತಮ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತವೆ. ಆದರೆ ಪಾಲಕ್, ರೆಡ್ ಮೀಟ್, ಸೋಯಾ ಮತ್ತು ಕಾಳುಗಳಂತಹ ಆಹಾರದೊಂದಿಗೆ ಸೇವಿಸಿದರೆ ಇದು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ.
ಕೋಸುಗಡ್ಡೆ, ಹೂಕೋಸು ಮತ್ತು ಎಲೆಕೋಸು ಮುಂತಾದ ಕ್ರೂಸಿಫೆರಸ್ ತರಕಾರಿಗಳು ಗೊಯಿಟ್ರೋಜೆನ್ ಎಂಬ ಅಂಶವನ್ನು ಹೊಂದಿರುತ್ತವೆ.ಚಿಯಾ ಬೀಜಗಳೊಂದಿಗೆ ಇದನ್ನು ತಿನ್ನುವುದರಿಂದ, ಅದರ ಜೀರ್ಣಕ್ರಿಯೆಯು ಸರಿಯಾಗಿ ಆಗುವುದಿಲ್ಲ.
ಸಾಸೇಜ್ ಮತ್ತು ಹ್ಯಾಮ್‌ನಂತಹ ಸಂಸ್ಕರಿಸಿದ ಮಾಂಸಗಳಲ್ಲಿ ಸೋಡಿಯಂ ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುತ್ತದೆ.ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಚಿಯಾ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಅವುಗಳನ್ನು ಸಂಸ್ಕರಿಸಿದ ಮಾಂಸದೊಂದಿಗೆ ಸೇವಿಸುವುದರಿಂದ ಆರೋಗ್ಯ ಪ್ರಯೋಜನಗಳನ್ನು ಕಡಿಮೆ ಮಾಡಬಹುದು.