ಮೊಟ್ಟೆ ತಿಂದ ನಂತರ ಇವುಗಳನ್ನು ತಿನ್ನುವ ತಪ್ಪನ್ನು ಮಾಡಬೇಡಿ..!
ಪ್ರೋಟೀನ್ ಹೊರತಾಗಿ, ಮೊಟ್ಟೆಯು ಅನೇಕ ಪೋಷಕಾಂಶಗಳಲ್ಲಿ ಸಮೃದ್ದಿಯಾಗಿದೆ. ಸ್ನಾಯುಗಳನ್ನು ಬಲಪಡಿಸುವುದರ ಜೊತೆಗೆ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
ಮೊಟ್ಟೆ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಮೊಟ್ಟೆಗಳನ್ನು ವಿವಿಧ ಆಹಾರಗಳಲ್ಲಿ ಬಳಸಲಾಗುತ್ತದೆ. ಆದರೆ ಕೆಲವು ಆಹಾರಗಳೊಂದಿಗೆ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕಾರಕ.
ಬಾಳೆಹಣ್ಣನ್ನು ಮೊಟ್ಟೆಯೊಂದಿಗೆ ಅಥವಾ ತಕ್ಷಣ ತಿನ್ನಬಾರದು. ಇದರಿಂದಾಗಿ ಅಜೀರ್ಣ ಸಮಸ್ಯೆ ಉಂಟಾಗಬಹುದು.
ಮೊಟ್ಟೆ ಮತ್ತು ಸೋಯಾ ಬೀನ್ಸ್ ಎರಡೂ ಪ್ರೋಟೀನ್‌ನ ಮೂಲಗಳಾಗಿವೆ. ಆದರೆ ಒಂದು ಪ್ರಾಣಿ ಮೂಲದ ಪ್ರೋಟೀನ್ ವಸ್ತು, ಇನ್ನೊಂದು ಸಸ್ಯ ಆಧಾರಿತ. ಹಾಗಾಗಿ ಎರಡನ್ನೂ ಜೊತೆಯಲ್ಲಿ ಸೇವಿಸುವುದನ್ನು ತಪ್ಪಿಸಬೇಕು.
ಹೆಚ್ಚಿನವರು ಬೆಳಗಿನ ಉಪಾಹಾರಕ್ಕೆ ಆಮ್ಲೆಟ್ ಮತ್ತು ಎಗ್ ಟೋಸ್ಟ್ ಮುಂತಾದವುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಅದೇ ಸಮಯದಲ್ಲಿ ಕಾಫಿ ಮತ್ತು ಚಹಾವನ್ನು ಸೇವಿಸುತ್ತಾರೆ, ಆದರೆ ಇವರೆಡರ ಕಾಂಬಿನೇಷನ್ ಅಪಾಯಕಾರಿ.
ಮೊಟ್ಟೆ ತಿಂದ ತಕ್ಷಣ ಅಥವಾ ನಂತರ ನಿಂಬೆಹಣ್ಣು ಸೇವನ ಬೇಡ. ಏಕೆಂದರೆ ಕೆಲವು ಮೊಟ್ಟೆಯ ಖಾದ್ಯಗಳಲ್ಲಿ ನಿಂಬೆಯನ್ನು ಬಳಸಿದರೂ, ಎರಡರ ಪ್ರತಿಕ್ರಿಯೆಯು ಹಾನಿಕಾರಕವಾಗಿದೆ.
ಪನೀರ್ ಮತ್ತು ಮೊಟ್ಟೆಗಳನ್ನು ಬೆರೆಸಿ ಆಹಾರವನ್ನು ತಯಾರಿಸಿ ತಿನ್ನಲಾಗುತ್ತದೆ. ಈ ರೀತಿ ತಿನ್ನುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು ಇದು ಮಲಬದ್ಧತೆಗೆ ಕಾರಣವಾಗ ಬಹುದು.
ಮೊಟ್ಟೆ ತಿಂದ ತಕ್ಷಣ ನೀರು ಕುಡಿಯಬೇಡಿ, ಮೊಟ್ಟೆಯಲ್ಲಿರುವ ಪ್ರೋಟೀನ್ ಜೀರ್ಣಿಸಿಕೊಳ್ಳಲು ಕಷ್ಟ. ಇದು ಹೊಟ್ಟೆ ನೋವು ಮತ್ತು ಅಜೀರ್ಣವನ್ನು ಉಂಟುಮಾಡುತ್ತದೆ.