ಡಯಟ್ ನೆಪದಲ್ಲಿ ತಕ್ಷಣ ಸಕ್ಕರೆ ಸೇವನೆ ನಿಲ್ಲಸಬೇಡಿ. ಇದು ಸಖತ್ ಡೇಂಜರ್..!
ಡಯಟ್ ನೆಪದಲ್ಲಿ ತಕ್ಷಣ ಸಕ್ಕರೆ ಸೇವನೆ ನಿಲ್ಲಸಬೇಡಿ. ಇದು ಸಖತ್ ಡೇಂಜರ್..!
Sugar: ಡಯಾಬಿಟಿಸ್ ಬಯದಿಂದ ನೀವು ಸಕ್ಕರೆ ಸೇವನೆ ನಿಲ್ಲಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ವಿಶ್ವಾದ್ಯಂತ ಇರುವ ಸಾಮಾನ್ಯ ಕಾಯಿಲೆಗಳಲ್ಲಿ ಮಧುಮೇಹ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಈ ಕಾಯಿಲೆಗೆ ತುತ್ತಾಗುತ್ತಾರೆ. ಒಮ್ಮೆ ಮಧುಮೇಹ ಬಂದರೆ ಈ ಕಾಯಿಲೆಯಿಂದ ಮುಕ್ತಿ ಪಡೆಯುವುದು ಸುಲಭವಲ್ಲ ಎಂಬುದು ತಿಳಿದಿರುವ ವಿಷಯ. ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಕಾರಣ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.
ಅದರಲ್ಲೂ 30 ವರ್ಷ ವಯಸ್ಸಿನವರು ಮಧುಮೇಹಕ್ಕೆ ತುತ್ತಾಗುತ್ತಿರುವುದು ಎಲ್ಲರನ್ನೂ ಚಿಂತೆಗೀಡುಮಾಡಿದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಮಧುಮೇಹ ಬಂದ ತಕ್ಷಣ ಸಕ್ಕರೆ ಸೇವನೆಯನ್ನು ನಿಲ್ಲಿಸುತ್ತಾರೆ. ಸಕ್ಕರೆಯನ್ನು ಆದಷ್ಟು ತಪ್ಪಿಸಿ. ಆದರೆ ಇತ್ತೀಚಿಗೆ ಸಕ್ಕರೆ ಖಾಯಿಲೆ ಇಲ್ಲದವರೂ ಕಡಿಮೆ ಸಕ್ಕರೆ ಸೇವಿಸುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ.
ನೀವು ಸಕ್ಕರೆಯನ್ನು ಕಡಿಮೆ ಮಾಡಿದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಒಮ್ಮೆಲೆ ಸಕ್ಕರೆ ತೆಗೆದುಕೊಳ್ಳುವುದನ್ನು ನಿಲ್ಲಿಸಿದರೆ ಏನಾಗುತ್ತದೆ ಎಂದು ನೋಡೋಣ.
ಸಾಮಾನ್ಯವಾಗಿ ಸಕ್ಕರೆಯಲ್ಲಿ ಎರಡು ವಿಧಗಳಿವೆ. ಇವುಗಳಲ್ಲಿ ಒಂದು ನೈಸರ್ಗಿಕ ಸಕ್ಕರೆ ಮತ್ತು ಇನ್ನೊಂದು ಸಂಸ್ಕರಿಸಿದ ಸಕ್ಕರೆ. ಮಾವು, ಅನಾನಸ್ ಮತ್ತು ತೆಂಗಿನಕಾಯಿಗಳಲ್ಲಿ ನೈಸರ್ಗಿಕ ಸಕ್ಕರೆ ಕಂಡುಬರುತ್ತದೆ.
ಸಂಸ್ಕರಿಸಿದ ಸಕ್ಕರೆ ಸುಕ್ರೋಸ್ ಹಾಗೂ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ. ಆದರೆ ನೈಸರ್ಗಿಕ ಸಕ್ಕರೆಯು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
ಅನೇಕ ಅಧ್ಯಯನಗಳು ಸಕ್ಕರೆಯನ್ನು ತ್ಯಜಿಸುವುದರಿಂದ ಮಾದಕ ವ್ಯಸನವನ್ನು ತೊರೆಯುವಂತೆಯೇ ದೇಹದ ಮೇಲೆ ಪರಿಣಾಮ ಬೀರಬಹುದು ಎಂದು ತೋರಿಸಿ ಕೊಡುತ್ತದೆ. ಇದರಿಂದಾಗಿ ನೀವು ಬೇಗನೆ ಸುಸ್ತಾಗುತ್ತೀರಿ ಮತ್ತು ನಿರಂತರ ತಲೆನೋವಿನಿಂದ ಬಳಲುತ್ತೀರಿ.
ಸಕ್ಕರೆಯನ್ನು ತ್ಯಜಿಸುವುದರಿಂದ, ದೇಹದಲ್ಲಿನ ಹೆಚ್ಚುವರಿ ಇನ್ಸುಲಿನ್ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಹಾಗಾಗಿ ಸಕ್ಕರೆ ಸೇವನೆ ಕಡಿಮೆ ಮಾಡಿದರೂ ನೈಸರ್ಗಿಕ ಸಕ್ಕರೆ ಸಿಗುವಂತೆ ಮಾಡಲು ಕೆಲವು ಬಗೆಯ ಹಣ್ಣುಗಳನ್ನು ಸೇವಿಸಬೇಕು ಎನ್ನುತ್ತಾರೆ ತಜ್ಞರು.