Foods to avoid : ಖಾಲಿ ಹೊಟ್ಟೆಯಲ್ಲಿ ಈ ಆಹಾರವನ್ನು ಸೇವಿಸುವ ತಪ್ಪು ಯಾವತ್ತು ಮಾಡಬೇಡಿ
ಸಿಟ್ರಸ್ ಹಣ್ಣುಗಳು : ಕಿತ್ತಳೆ , ಮೋಸಂಬಿ, ಪೇರಳೆಯಂಥಹ ಹಣ್ಣುಗಳು ಹೊಟ್ಟೆಯಲ್ಲಿ ಆಸಿಡ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ಜಠರದುರಿತ ಮತ್ತು ಗ್ಯಾಸ್ಟ್ರಿಕ್ ರೋಗಗಳ ಅಪಾಯ ಹೆಚ್ಚುತ್ತದೆ. ಈ ಹಣ್ಣುಗಳಲ್ಲಿ ಫೈಬರ್ ಮತ್ತು ಫ್ರಕ್ಟೋಸ್ ಕೂಡ ಅಧಿಕವಾಗಿರುತ್ತದೆ. ಈ ಕಾರಣದಿಂದಾಗಿ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣ ಕ್ರಿಯೆ ನಿಧಾನವಾಗುತ್ತದೆ.
ಅನೇಕರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸವಿರುತ್ತದೆ. ನಿಮಗೂ ಈ ಅಭ್ಯಾಸವಿದ್ದರೆ ಅದನ್ನು ತಕ್ಷಣ ಬಿಟ್ಟು ಬಿಡಿ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಎದುರಾಗುತ್ತದೆ. ಏಕೆಂದರೆ ಇದನ್ನು ಕುಡಿದ ನಂತರ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆ ಶುರುವಾಗುತ್ತದೆ. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ.
ಹಸಿ ತರಕಾರಿಗಳನ್ನು ಬೆರೆಸಿ ತಯಾರಿಸಿದ ಸಲಾಡ್ ಬೆಳಗಿನ ಉಪಾಹಾರಕ್ಕಿಂತ ಮಧ್ಯಾಹ್ನದ ಊಟಕ್ಕೆ ಉತ್ತಮವಾಗಿರುತ್ತದೆ. . ಹಸಿ ತರಕಾರಿಗಳಲ್ಲಿ ಫೈಬರ್ ಅಧಿಕವಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿನಾಮ ಬೀರುತ್ತದೆ.
ಖಾಲಿ ಹೊಟ್ಟೆಯಲ್ಲಿ ಮೆಣಸು ಮತ್ತು ಮಸಾಲೆಯುಕ್ತ ವಸ್ತುಗಳನ್ನು ತಿನ್ನುವುದರಿಂದ stomach liningನಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಖಾಲಿ ಹೊಟ್ಟೆಯಲ್ಲಿ ಹೆಚ್ಚು ಖಾರವಾಗಿರುವ ಆಹಾರ ಸೇವಿಸುವುದರಿಂದ, ಆಸಿದಿಕಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಅಜೀರ್ಣದಂತಹ ಸಮಸ್ಯೆಗೂ ಕಾರಣವಾಗುತ್ತದೆ.
ಇನ್ನುಕೆಲವರಿಗೆ ಬೆಳಿಗ್ಗೆ ಬರೀ ಹಣ್ಣಿನ ರಸ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಖಾಲಿ ಹೊಟ್ಟೆಗೆ ಹಣ್ಣಿನ ರಸ ತೆಗೆದುಕೊಂಡರೆ, ಮೇದೋಜ್ಜೀರಕ ಗ್ರಂಥಿಯ ಮೇಲಿನ ಹೊರೆ ಹೆಚ್ಚಾಗುತ್ತದೆ. ಮತ್ತು ಹಣ್ಣಿನಲ್ಲಿರುವ ಫ್ರಕ್ಟೋಸ್ ಯಕೃತ್ತಿನ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ಖಾಲಿ ಹೊಟ್ಟೆಗೆ ಹಣ್ಣಿನ ರಸವನ್ನು ಕುಡಿಯುವುದರಿಂದ ಮಧುಮೇಹದ ಅಪಾಯ ಕೂಡಾ ಕಂಡುಬರುತ್ತದೆ.