ತಲೆಗೂದಲು ಉದುರುತ್ತಿದ್ದರೆ ಚಿಂತೆಯೇ ಬೇಡ: ಈ ಸಿಂಪಲ್ ಸಲಹೆಗಳನ್ನು ಪಾಲಿಸಿ ಸಾಕು
ಆರೋಗ್ಯಕರ ತಲೆಗೂದಲಿನ ಬೆಳವಣಿಗೆಗೆ ಜೀವಸತ್ವಗಳು & ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ತಲೆಗೂದಲಿಗೆ ಬಯೋಟಿನ್, ವಿಟಮಿನ್ D, ಸತು & ಕಬ್ಬಿಣದಂತಹ ಅಗತ್ಯ ಪೋಷಕಾಂಶಗಳು ಬೇಕಾಗುತ್ತದೆ. ತಲೆಗೂದಲಿನ ಆರೋಗ್ಯದಲ್ಲಿ ಪ್ರೊಟೀನ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಏಕೆಂದರೆ ಕೂದಲು ಪ್ರಾಥಮಿಕವಾಗಿ ಕೆರಾಟಿನ್ ಎಂಬ ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ಪ್ರೊಟೀನ್‍ಗಳಲ್ಲಿ ಸಮೃದ್ಧವಾಗಿರುವ ಆಹಾರ ಸೇವಿಸುವುದರಿಂದ ಕೂದಲಿನ ಬೆಳವಣಿಗೆ, ಶಕ್ತಿ & ಒಟ್ಟಾರೆ ಚೈತನ್ಯವನ್ನು ಬೆಂಬಲಿಸುತ್ತದೆ. ಮಾಂಸ, ಮೊಟ್ಟೆ, ಡೈರಿ ಉತ್ಪನ್ನಗಳು, ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಉಪಯುಕ್ತವಾಗಿದೆ.
ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
ಒಮೆಗಾ -3 ಕೊಬ್ಬಿನಾಮ್ಲಗಳು ನೆತ್ತಿಯನ್ನು ಪೋಷಿಸುತ್ತದೆ ಮತ್ತು ತಲೆಗೂದಲಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಸಾಲ್ಮನ್ ಮೀನು, ಅಗಸೆಬೀಜಗಳು ಮತ್ತು ವಾಲ್‌ನಟ್‌ಗಳು ಒಮೆಗಾ-3ಗಳ ಉತ್ತಮ ಮೂಲಗಳಾಗಿವೆ. ಹೀಗಾಗಿ ತಲೆಗೂದಲಿನ ಬೆಳವಣಿಗೆಗೆ ಇವುಗಳನ್ನು ನಿಯಮಿತವಾಗಿ ಸೇವಿಸಬೇಕು.
ವಿಟಮಿನ್ B7 ಎಂದೂ ಕರೆಯಲ್ಪಡುವ ಬಯೋಟಿನ್, ಆರೋಗ್ಯಕರ ಕೂದಲಿನ ಬೆಳವಣಿಗೆ & ಶಕ್ತಿಯನ್ನು ಬೆಂಬಲಿಸುವ ಪ್ರಮುಖ ಪೋಷಕಾಂಶ. ಬಯೋಟಿನ್ ಭರಿತ ಆಹಾರ ಸೇವಿಸುವುದರಿಂದ ತಲೆಗೂದಲಿನ ಬೆಳವಣಿಗೆಗೆ ಅತ್ಯುತ್ತಮವಾಗಿದೆ. ಬಯೋಟಿನ್ ಸಮೃದ್ಧವಾಗಿರುವ ಮೊಟ್ಟೆ, ಬಾದಾಮಿ, ಸಿಹಿ ಆಲೂಗಡ್ಡೆ ಮತ್ತು ಪಾಲಕ್ ಸೇವಿಸಬೇಕು.
ಈ ವಿಟಮಿನ್ ಕೂದಲಿನ ಕಿರುಚೀಲಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಬ್ಬಿನಾಂಶವಿರುವ ಮೀನು, ಅಣಬೆ, ಕಿತ್ತಳೆ & ಧಾನ್ಯಗಳಂತಹ ಬಲವರ್ಧಿತ ಆಹಾರಗಳಲ್ಲಿ ವಿಟಮಿನ್ D ಅಂಶವಿರುವುದರಿಂದ ಆಹಾರದಲ್ಲಿ ಸೇವಿಸುವುದು ಉತ್ತಮ.