ಹೊರ ಹೋಗುವ ನಿರ್ಧಾರ ಮಾಡಿದ್ದೇಕೆ ಧರ್ಮ ಕೀರ್ತಿರಾಜ? ಬಿಗ್ ಬಾಸ್ ನಲ್ಲಿ ಡಬಲ್ ಎಲಿಮಿನೇಷನ್ ಶಾಕ್!
ಧರ್ಮ ಕೀರ್ತಿರಾಜ ಸ್ಯಾಂಡಲ್‌ವುಡ್‌ನ ಖ್ಯಾತ ನಟ. ಇವರ ತಂದೆ ಕೀರ್ತಿರಾಜ ಕನ್ನಡದ ಪ್ರಸಿದ್ಧ ಖಳನಟ. ತಂದೆಗೆ ಸಿನಿಮಾಗಳಿಂದ ಸಿಕ್ಕ ಯಶಸ್ಸು ಪುತ್ರ ಧರ್ಮನಿಗೆ ಸಿಗಲಿಲ್ಲ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಆಗಿರುವ ಧರ್ಮ ಕೀರ್ತಿರಾಜ ಮನೆಯಲ್ಲಿ ಬೇಕೆಂದಾಗ ಮಾತ್ರ ಮಾತನಾಡುತ್ತಾರೆ. ತಾಳ್ಮೆಯಿಂದ ಇರುತ್ತಾರೆ. ಇದು ಕೆಲವರಿಗೆ ಸೈಲೆಂಟ್ ಅನಿಸಿದರೂ ಧರ್ಮನ ವ್ಯಕ್ತಿತ್ವೌೇ ಅಂಥದ್ದು.
ಧರ್ಮ ಕೀರ್ತಿರಾಜ ಆಟಕ್ಕೆ ಬಿಗ್ ಬಾಸ್ ವೀಕ್ಷಕರು ಸಹ ತಲೆದೂಗಿದ್ದಾರೆ. ಧರ್ಮರಾಯನ ಗುಣ ಕಣಯ್ಯ ಎಂದು ಹಾಡಿ ಹೊಗಳುತ್ತಿದ್ದಾರೆ. ಈ ಹೊತ್ತಲ್ಲಿ ಧರ್ಮ ಬಿಗ್ ಬಾಸ್‌ನಿಂದ ಆಚೆ ಬರುವ ನಿರ್ಧಾರ ಮಾಡಿದ್ದಾರೆ.
ಕಳೆದ ವೀಕೆಂಡ್ ಸಂಚಿಕೆಯಲ್ಲಿ ಧರ್ಮನಿಗೆ ಮನೆಯವರೆಲ್ಲ ʻನಾಲಾಯಕ್ʼ ಎಂದರು. ಮನೆಯಲ್ಲಿರಲು ನಾಲಾಯಕ್ ಸ್ಪರ್ಧಿ ಯಾರೆಂಬ ಕಿಚ್ಚ ಸುದೀಪ ಪ್ರಶ್ನಗೆ ಧರ್ ಕೀರ್ತಿರಾಜ ಹೆಸರನ್ನೇ ಅನೇಕರು ತೆಗೆದುಕೊಂಡರು. ಆ ಟ್ರೋಫಿ ಕೂಡ ಧರ್ಮನಿಗೆ ಸೇರಿತು.
ಆ ದಿನದಿಂದ ಧರ್ಮ ತುಂಬಾ ಡಿಸ್ಟರ್ಬ್ ಆಗಿದ್ದಾರೆ. ತಮ್ಮನ್ನು ನಾಲಾಯಕ್ ಎಂದಿದ್ದಕ್ಕೆ ಹರ್ಟ್ ಆಗಿದೆ ಎಂದಿದ್ದಾರೆ. ನನ್ನ ವ್ಯಕ್ತಿತ್ವವೇ ಹೀಗೆ. ನಾನು ಇರೋದೇ ಈ ರೀತಿ ಎಂದಿದ್ದಾರೆ. ಇದೇ ಕಾರಣಕ್ಕೆ ಇದೇ ಭಾನುವಾರ ನಾನು ಮನೆಯಿಂದ ಹೊರ ಹೋಗ್ತಿನಿ ಎಂದು ಧರ್ಮ ಹೇಳಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಜೋಡಿಗಳನ್ನು ಮಾಡಿ ಆಟ ಆಡಿಸುತ್ತಿರುವ ಕಾರಣ ನಾಮಿನೇಷನ್ ಕೂಡ ಜೋಡಿಯಾಗಿಯೇ ನಡೆಯುತ್ತಿದೆ.
ಅಲ್ಲದೇ ಕಳೆದ ವಾರ ಯಾರೂ ಕೂಡ ಬಿಗ್ ಬಾಸ್ ಮನೆಯಿಂದ ಆಚೆ ಬಂದಿಲ್ಲ. ಹೀಗಾಗಿ ಈ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್‌ನಡೆದರೂ ನಡೆಯಬಹುದು ಎನ್ನಲಾಗಿದೆ.