ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಡಬಲ್ ಜಾಕ್‌ಪಾಟ್ !ಮೂಲ ವೇತನದಲ್ಲಿಯೇ ಆಗುವುದು ಭಾರೀ ಏರಿಕೆ !ಎಷ್ಟಾಗುವುದು ಹೆಚ್ಚಳ ಇಲ್ಲಿದೆ ಲೆಕ್ಕಾಚಾರ
8ನೇ ವೇತನ ಆಯೋಗದ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಈ ವೇತನ ಸಮಿತಿಯು ರಚನೆಯಾಗುವ ಕಾಲ ಹತ್ತಿರವಾಗಿದೆ.
ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ಹೊರ ಬೀಳುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ.
ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಆರ್ಗನೈಸೇಷನ್ಸ್ (NC-JCM) ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು 2.86 ರ ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ಲೆಕ್ಕ ಹಾಕಬೇಕು ಎಂದು ಪ್ರಸ್ತಾಪಿಸಿದೆ. ಇದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡರೆ, ಇತ್ತೀಚಿನ ವರದಿಗಳ ಪ್ರಕಾರ ವೇತನವು 2.86 ಪಟ್ಟು ಹೆಚ್ಚಾಗುತ್ತದೆ.
ವೇತನ ಮತ್ತು ಪಿಂಚಣಿಗಳನ್ನು ಲೆಕ್ಕಾಚಾರ ಮಾಡಲು 'ಫಿಟ್ಮೆಂಟ್ ಫ್ಯಾಕ್ಟರ್' ಅನ್ನು ಬಳಸಲಾಗುತ್ತದೆ. 7ನೇ ವೇತನ ಆಯೋಗದ ನಿಯಮಗಳ ಪ್ರಕಾರ ಫಿಟ್‌ಮೆಂಟ್ ಅಂಶವನ್ನು 2.57ಕ್ಕೆ ನಿಗದಿಪಡಿಸಲಾಗಿತ್ತು. ಇದರಿಂದ ಮೂಲ ವೇತನ 7,000ದಿಂದ 18,000ಕ್ಕೆ ಏರಿಕೆಯಾಗಿದೆ.
2.86ರ ಫಿಟ್ ಮೆಂಟ್ ಅಂಶ ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ರೂ.18,000ದಿಂದ ರೂ.51,480ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ಭಾರಿ ವೇತನ ಹೆಚ್ಚಳವಾಗಲಿದೆ.
8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ ಬದಲಾವಣೆಯಾದರೆ ನಿವೃತ್ತ ನೌಕರರ ಮೇಲೂ ಪರಿಣಾಮ ಬೀರಲಿದೆ.2.86ರ ಫಿಟ್‌ಮೆಂಟ್ ಅಂಶ ಜಾರಿಗೆ ಬಂದರೆ ಪಿಂಚಣಿದಾರರ ಮೂಲ ಪಿಂಚಣಿ 25,740 ರೂಪಾಯಿಗೆ ಏರುತ್ತದೆ.
ಕೇಂದ್ರ ಸರ್ಕಾರವು ಮುಂದಿನ ವರ್ಷ ಏಪ್ರಿಲ್‌ನಿಂದ ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಪರಿಚಯಿಸುವ ನಿರೀಕ್ಷೆಯಿದೆ. ಯುಪಿಎಸ್ ಅಡಿಯಲ್ಲಿ, ನಿವೃತ್ತಿಯ ಹಿಂದಿನ 12 ತಿಂಗಳುಗಳಲ್ಲಿ ಉದ್ಯೋಗಿಯ ವೇತನವನ್ನು ಆಧರಿಸಿ ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ.
ಸಾಮಾನ್ಯವಾಗಿ, ವೇತನ ಆಯೋಗವನ್ನು 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ. 7ನೇ ವೇತನ ಆಯೋಗವನ್ನು 2014ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, 2016ರಲ್ಲಿ ಜಾರಿಗೆ ಬಂದಿದೆ. ಹಾಗೆ ನೋಡಿದರೆ 2026ರಲ್ಲಿ 8ನೇ ಉತ್ತರ ಆಯೋಗ ಜಾರಿಯಾಗಬೇಕಾದರೆ ಈಗಲೇ ಅಧಿಸೂಚನೆ ಬರುವುದು ಬಹಳ ಮುಖ್ಯ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 2025 ರಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ನಂತರ ಅವರು 8ನೇ ವೇತನ ಆಯೋಗದ ರಚನೆಯನ್ನು ಘೋಷಿಸುವ ನಿರೀಕ್ಷೆಯಿದೆ. ಈ ಘೋಷಣೆಗೆ ಬಜೆಟ್ ಸರಿಯಾದ ಸಮಯ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.