Double Rajyog: ಬುದ್ಧಿದಾತ ಬುಧನಿಂದ `ಡಬಲ್ ರಾಜಯೋಗ` ರಚನೆ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ!
Double Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಬುದ್ಧಿದಾತ ಬುಧ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಅಲ್ಲಿ ಸೂರ್ಯ ಹಾಗೂ ಶನಿಯ ಜೊತೆಗೆ ಆತನ ಮೈತ್ರಿ ನೆರವೇರಿದೆ. ಈ ಮೈತ್ರಿಗಳು ಹಲವು ಜಾತಕದವರಿಗೆ ವಿಶೇಷ ಲಾಭಗಳನ್ನು ನೀಡಲಿವೆ. (Spiritual News In Kannada)
ಮೇಷ ರಾಶಿ: ಬುಧ ಗೋಚರದಿಂದ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ಶುಭ ಯೋಗ ರಚನೆಯಾಗುತ್ತಿದೆ. ಹೀಗಿರುವಾಗ ನಿಮಗೆ ಅಪಾರ ಧನ ಸಂಪತ್ತು ಪ್ರಾಪ್ತಿಯಾಗಲಿದೆ. ಇದರ ಜೊತೆಗೆ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಸಿಗಲಿದೆ. ವಿದೇಶದಲ್ಲಿ ನೌಕರಿ ಪಡೆಯುವ ನಿಮ್ಮ ಆಸೆ ಈಡೇರುವ ಸಾಧ್ಯತೆ ಇದೆ. ಇದರಿಂದ ಜೀವನದಲ್ಲಿ ಸಂತುಷ್ಟಿ ನಿಮ್ಮದಾಗಲಿದೆ. ನಿಮ್ಮ ಪರಿಶ್ರಮದ ಹಿನ್ನೆಲೆ ನಿಮಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಬುದ್ಧಿಯ ಕೌಶ್ಯಲ್ಯದಿಂದ ನೀವು ಇತರರನ್ನು ಪ್ರಭಾವಿತಗೊಳಿಸುವಿರಿ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ಪಾಟ್ನರ್ಶಿಪ್ ನಲ್ಲಿ ಮಾಡಲಾದ ಬಿಸ್ನೆಸ್ ನಿಂದ ಅಪಾರ ಧನಲಾಭ ನಿಮ್ಮದಾಗಲಿದೆ. ಇದರ ಜೊತೆಗೆ ಯಶಸ್ಸು ಕೂಡ ನಿಮ್ಮದಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ.
ತುಲಾ ರಾಶಿ: ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಡಬಲ್ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಆದ್ಯಾತ್ಮದತ್ತ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಭಾಗವಹಿಸುವಿರಿ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಆದರೆ ಇದರಿಂದ ಭವಿಷ್ಯದಲ್ಲಿ ನಿಮಗೆ ಲಾಭ ಸಿಗಲಿದೆ. ಪದೋನ್ನತಿ, ಇನ್ಸೇಂಟೀವ ಲಾಭ ನಿಮಗೆ ಸಿಗುವ ಸಾಧ್ಯತೆ ಇದೆ. ನಿಮ್ಮ ಮೂಲಕ ಮಾಡಲಾದ ಕೆಲಸದ ಫಲ ನಿಮಗೆ ಸಿಗಲಾರರಂಭಿಸಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಆರ್ಥಿಕ ವೇದಿಕೆಯ ಕುರಿತು ಹೇಳುವುದಾದರೆ. ಅಪಾರ ಹಣಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ಷೇರು ಮಾರುಕಟ್ಟೆಯಿಂದ ನಿಮಗೆ ಲಾಭ ಸಿಗಲಿದೆ. ಭಾಗ್ಯದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ವೈವಾಹಿಕ ಜೀವನದಲ್ಲಿಯೂ ಕೂಡ ಸಂತೃಪ್ತಿ ಇರಲಿದೆ.
ಕುಂಭ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಈ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ನಿಮಗೂ ಕೂಡ ಅದೃಷ್ಟದ ಬೆಂಬಲ ಸಿಗಲಿದೆ. ಪಿತ್ರಾರ್ಜಿತ ಸಂಪತ್ತು ಮತ್ತು ಷೇರು ಮಾರುಕಟ್ಟೆಯಿಂದ ನಿಮಗೆ ಧನಲಾಭ ಸಿಗಲಿದೆ. ಮಕ್ಕಳ ಕಡೆಯಿಂದ ನಡೆದುಕೊಂಡು ಬಂದ ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ವೃತ್ತಿ ಜೀವನದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವ ಅವಶ್ಯಕತೆ ಇದೆ. ಆದರೆ, ಬುಧನ ಕೃಪೆಯಿಂದ ನಿಮಗೆ ಭಾರಿ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)