Bigg Boss 11: ́`ನಮಸ್ಕಾರ ದೇವ್ರು`.. ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಈ ಖ್ಯಾತ ಯೂಟ್ಯೂಬರ್..?! ಯಾರು ಅಂತಾ ಗೆಸ್ ಮಾಡಿ!
ಡಾ ಬ್ರೋ..ಈ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕರುನಾಡಿನ ಮನ ಗೆದ್ದಿರೋ ಈತ ವಿದೇಶಗಳಲ್ಲಿಯೂ ಕನ್ನಡ ಭಾಷೆಯನ್ನು ಮಾತನಾಡುತ್ತಾ, ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ ಕರುನಾಡಿನ ಹೆಮ್ಮೆಯನ್ನು ಪ್ರಪಂಚದಾದ್ಯಂತ ಸಾರಲು ಹೊರಟವರು.
ಡಾ ಬ್ರೋ ಫೇಮಸ್ ಟ್ರಾವೆಲ್ ವ್ಲಾಗರ್ ಆಗಿ ಹೆಸರು ಗಳಿಸಿದವರು. ತಮ್ಮ ವಿಭಿನ್ನವಾದ ವ್ಲಾಗಿಂಗ್ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದವರು.
ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ.
ಬಿಗ್ ಬಾಸ್ ಸೀಸನ್ 11 ಅನೌನ್ಸ್ ಆಗುತ್ತಿದ್ದಂತೆ, ಈ ಭಾರಿ ಮನೆಗೆ ಎಂಟ್ರಿ ಕೊಡಲಿರುವ ಆ ಸ್ಪರ್ಧಿಗಳು ಯಾರು ಎಂಬ ಕುತೂಹಲ ಮೂಡಿಸಿದೆ. ಈಗಾಗಲೇ ಯಾವ ಯಾವ ಫೇಮಸ್ ಪರ್ಸನಾಲಿಟೀಸ್ ಈ ಬಿಗ್ ಬಾಸ್ ಮನೆಗೆ ಎಂಟ್ಟಿ ಕೊಡಲಿದ್ದಾರೆ ಎನ್ನು ಬಗ್ಗೆ ಚರ್ಚೆಗಲು ಶುರುವಾಗಿದೆ.
ಇತ್ತೀಚೆಗಷ್ಟೆ ಕನ್ನಡಸ ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಬಿಗ್ ಬಾಸ್ ಮೆನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು, ಇದೀಗ ಇದರ ಬೆನ್ನಲ್ಲೆ ಖ್ಯಾತ ಯೂಟ್ಯೂಬರ್ ಡಾ ಬ್ರೋ ಹೆಸರು ಕೂಡ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಪಟ್ಟಿಯಲ್ಲಿ ಕೇಳಿ ಬಂದಿದೆ.
ಟ್ವಿಟರ್ ವಿಡಿಯೋ ಒಂದು ಸಾಮಾಜಿಕ ಜಾಲತಾನದಲ್ಲಿ ಇದೀಗ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಡಾ ಬ್ರೋ ಬಿಗ್ ಬಾಸ್ ಕುರಿತು ಮಾತನಾಡಿದ್ದಾರೆ ಎಂದು ಬರೆಯಲಾಗಿದೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು. ಈ ಸುದ್ದಿ ಕೇಳಿ ಡಾ ಬ್ರೋ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಇನ್ನೂ, @Sumnexyz ಎಂಬ ಟ್ವಿಟರ್ ಬಳಕೆದಾದರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಡಾ ಬ್ರ ಹಾಗೂ ಕಿಚ್ಚಾ ಸುದೀಪ್ ಇಬ್ಬರನ್ನೂ ಕೂಡ ಈ ವಿಡಿಯೋದ ಕೆಳಗೆ ಟ್ಯಾಗ್ ಮಾಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ, ಅವರ ಯೂಟ್ಯೂಬ್ ಲೈವ್‌ನದ್ದಾಗಿದೆ. @Sumnexyz ಎನ್ನುವ ಬಳಕೆದಾರ ಯೂಟ್ಯೂಬ್ ಲೈವ್‌ನಲ್ಲಿ ಕೇಳಿದ ಪ್ರಶ್ನೆಗೆ ಡಾ ಬ್ರೋ ಉತ್ತರಿಸಿದ್ದು, ತನ್ನ ಪ್ರಶ್ನೆಗೆ ಉತ್ತರಿಸಿದಕ್ಕಾಗಿ ಅಭಿಮಾನಿ ಸಂತಸಗೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಯೂಟ್ಯೂಬ್ ಲೈವ್‌ನಲ್ಲಿ ಡಾ ಬ್ರೋ ಅವರನ್ನು ತಮ್ಮ ಅಭಿಮಾನಿಗಳು ಕಾಮೆಂಟ್ ಸೆಕ್ಷನ್‌ನಲ್ಲಿ ಪ್ರಸ್ನೆಗಳನ್ನು ಕೇಳುತ್ತಿದ್ದರು, ಒಂದೊಂದೇ ಪ್ರಸ್ನೆಗೆ ಉತ್ತರಿಸುತ್ತಿದ್ದ ಡಾ ಬ್ರೋ @Sumnexyz ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದರು.
@Sumnexyz ಅವರು ಕಾಮೆಂಟ್ ಸೆಕ್ಷನ್‌ನಲ್ಲಿ "ಬ್ರೋ...ನೀವು ಬಿಗ್ ಬಾಸ್ ಸೀಸನ್ 11 ನಲ್ಲಿ ಬಿಗ್ ಬಾಸ್ ಮನೆಗೆ ಹೋಗುತ್ತೀರಾ..? ಎಂದು ಅಭಿಮಾನಿ ಕೇಳಿದ ಪ್ರಸ್ನೆಗೆ ಉತ್ತರಿಸಿದ ಡಾ ಬ್ರೋ " ಬಿಗ್ ಬಾಸ್ ಮಾನೆಯಲ್ಲಿ ಮೂರು ತಿಂಗಳು ಇರೋಕೆ ಕಷ್ಟ.. ಆ ಮೂರು ತಿಂಗಳುಗಳಲ್ಲಿ ನಾನು 5 ದೇಶ ಸುತ್ತಿ ಬರುತ್ತೇನೆ" ಎಂದಿದ್ದಾರೆ.
ಇನ್ನೂ ಈ ಪ್ರಸ್ನೆಗೆ ಡಾ ಬ್ರೋ ಉತ್ತರಿಸಿರುವ ವಿಡಿಯೋವನ್ನು ಹಂಚಿಕೊಂಡಿರುವ @Sumnexyz. ಡಾ ಬ್ರೋ ನನ್ನ ಪ್ರಶ್ನೆಗೆ ಲೈವ್‌ನಲ್ಲಿ ಉತ್ತರಿಸಿದ್ದೀರ.. ಈ ಕ್ಷಣ ನನಗೆ ಜೀವನ ಪರ್ಯಂತ ನೆನಪಿನಲ್ಲಿ ಉಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.