ಡಾ. ಮನೋಜ್ ಕುಮಾರ್ ಕೃಷ್ಣಪ್ಪ ಅವರಿಗೆ ಜೀ ʼಯುವರತ್ನʼ ಪ್ರಶಸ್ತಿ ಪ್ರದಾನ..!
ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.
ಈ ಪೈಕಿ ಡಾ. ಮನೋಜ್ ಕುಮಾರ್ ಕೃಷ್ಣಪ್ಪ, ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್ ಅವರ ಸಾಧನೆಯನ್ನು ಗುರುತಿಸಿ ಜೀ ನ್ಯೂಸ್ ʼಯುವ ರತ್ನ ಪ್ರಶಸ್ತಿʼ ಪ್ರಧಾನ ಮಾಡಿ ಗೌರವಿಸಿತು.
ಡಾ. ಮನೋಜ್ ಕುಮಾರ್ ಕೃಷ್ಣಪ್ಪ ಇವರು ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್. ವಿಕಸಿತ ಭಾರತದ ಕನಸು ಕಾಣ್ತಿರೋ ಸುಸಮಯದಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರೋ ಮೆಟ್ರೋ ಸೇವೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ..
ಮನೋಜ್ ಕುಮಾರ್ ಅವರು ಯುದ್ದ ವಿಮಾನ ತೇಜಸ್ ಹಾಗೂ ಕಲ್ಕತ್ತ ಅಂಡರ್ ವಾಟರ್ ಮೆಟ್ರೋ ಪ್ರಾಜೆಕ್ಟ್ ಜಮ್ಮು ಕಾಶ್ಮೀರ ಮೆಟ್ರೋ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರೂ ಕನ್ನಡಿಗ ಇವರು..
ಜನರಿಗೆ ಅತ್ಯಂತ ಸುರಕ್ಷಿತ ಸೇವೆ ಕಲ್ಪಿಸಿ ಕೊಡೋದೆ ನಮ್ಮ ಧ್ಯೇಯ ಅನ್ನೋ ಇವರ ಸೇವೆ ಸದಾ ಮುಂದುವರೆಯುತ್ತಿದೆ. ಮನೋಜ್ ಕುಮಾರ್ ಕೃಷ್ಣಪ್ಪ ಅವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.