Dr. M.G. ರಂಗಧಾಮಯ್ಯ ಅವರಿಗೆ ಜೀ ನ್ಯೂಸ್ ʼಯುವರತ್ನ ಪ್ರಶಸ್ತಿʼ ಗೌರವ..!
ಸರ್ಕಾರಿ ವೃತ್ತಿಯನ್ನೇ ತ್ಯಜಿಸಿ ನಿರಂತರ ಜನಸೇವೆಯ ಮೂಲಕ ತಮ್ಮ ಸೇವೆ ಮುಂದುವರೆಸಿದ್ದಾರೆ. ಹಾಗಾಗಿ ರಂಗಧಾಮಯ್ಯ ಅವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.
ನಿತ್ಯ ಮನೆಗೆ ಬರುವ ನೂರಾರು ಜನರ ಕಷ್ಟ ಆಲಿಸಿ ಕೈಲಾದ ಸಹಾಯಹಸ್ತ ಚಾಚುವ ರಂಗಧಾಮಯ್ಯ ಅವರು ರಾಜಕೀಯದ ಮೂಲಕ ಜನಸೇವೆ ಸಾಧ್ಯ ಎಂಬ ನಂಬಿಕೆ ಹೊಂದಿದ್ದಾರೆ.
ಈ ಪೈಕಿ ಗರುಡಾದ್ರಿ ಡೆವಲಪರ್ಸ್ ರೂವಾರಿ ರಂಗ ಧಾಮಯ್ಯ ಅವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಭಗವಂತನ ಮೇಲೆ ಅಪಾರ ನಂಬಿಕೆ ಹೊಂದಿರುವ ರಂಗಧಾಮಯ್ಯ ಅವರು ಜನರ ಕಷ್ಟಕ್ಕೆ ಹೆಗಲಾಗೋದು ನನ್ನ ಕಾಯಕ ಎನ್ನುತ್ತಾರೆ.
ತಳಮಟ್ಟದಿಂದ ಬೆಳೆದು ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.