James Release: ಎಲ್ಲೆಲ್ಲೂ `ಜೇಮ್ಸ್` ಅಬ್ಬರ
'ಜೇಮ್ಸ್' ಮೊದಲ ದಿನ (ಮಾರ್ಚ್ 17) ಮತ್ತು ಐದು ವಿಭಿನ್ನ ಭಾಷೆಗಳಲ್ಲಿ 4000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ.
ಕನ್ನಡದ ಒರಿಜಿನಲ್ ಜೊತೆಗೆ ತಮಿಳು, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗುತ್ತಿರುವ 'ಜೇಮ್ಸ್' ಕರ್ನಾಟಕವೊಂದರಲ್ಲೇ 400 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ನಾಯಕ ನಟನಾಗಿ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ 'ಜೇಮ್ಸ್' ಅನ್ನು 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾ ಆನಂದ್ , ಅನು ಪ್ರಭಾಕರ್ ಮುಖರ್ಜಿ, ಶ್ರೀಕಾಂತ್ ಮೇಕಾ , ಶರತ್ ಕುಮಾರ್ ಮತ್ತು ಇತರರು ನಟಿಸಿದ್ದಾರೆ. ಕಿಶೋರ್ ಪತ್ತಿಕೊಂಡ ನಿರ್ಮಾಪಕರಾಗಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ.
ಈ ಚಿತ್ರದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಮೂವರೂ ಪುತ್ರರನ್ನು ಕಾಣಬಹುದು. ಅಪ್ಪು ಅಭಿನಯದ ಕೊನೆಯ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಕೂಡ ನಟಿಸಿದ್ದಾರೆ.
ಚಿತ್ರದ ಮತ್ತೊಂದು ವಿಶೇಷವೆಂದರೆ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಪಾತ್ರಕ್ಕೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ . 2020 ರ ಅಕ್ಟೋಬರ್‌ನಲ್ಲಿ ಅಪ್ಪು ಅವರ ದುರಂತ ಮತ್ತು ದುರದೃಷ್ಟಕರ ನಿಧನದ ನಂತರ ಆಪ್ಪು ಅವರ ಪಾತ್ರಕ್ಕೆ ಶಿವಣ್ಣ ಡಬ್ಬಿಂಗ್ ಮಾಡಿದ್ದಾರೆ.