Dr. RajKumar Movies: ವರನಟನ ಅಭಿನಯದ ಸೂಪರ್ ಹಿಟ್ ಚಿತ್ರಗಳ ಅಚ್ಚರಿಯ ಸಂಗತಿಗಳು..!
1. ʻಬಂಗಾರದ ಮನುಷ್ಯʼ :- ಚಂದನವನದಲ್ಲಿ ಅತಿ ಹೆಚ್ಚು ಸಿನಿಮಾ ಚಿತ್ರಮಂದಿರದಲ್ಲಿ ಓಡಿದ ಸಿನಿಮಾವಾಗಿದೆ. ʻಬಂಗಾರದ ಮನುಷ್ಯʼ ಚಿತ್ರವನ್ನು ಸಿದ್ದಲಿಂಗಯ್ಯ ನಿರ್ದೇಶನ ಮಾಡಿದ್ದು, ಇದರಲ್ಲಿ ಡಾ. ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ ಕಾಲಕ್ಕೆ ಈ ಚಿತ್ರ ಸಾಮಾಜಿಕ ಕ್ರಾಂತಿಯೇ ಆಗಿತ್ತು.
2. ʻಅನುರಾಗ ಅರಳಿತುʼ :- ಕನ್ನಡ ಚಿತ್ರರಂಗದಲ್ಲಿ 1986ರಲ್ಲಿ ತೆರೆಗೆ ಬಂದ ಡಾ. ರಾಜ್‌ಕುಮಾರ್ ಅಭಿನಯದ ʻಅನುರಾಗ ಅರಳಿತುʼ ಸಿನಿಮಾ ತೆಲುಗು, ಹಿಂದಿ, ಸಿನ್ಹಾಳ ಸೇರಿದಂತೆ 7 ಭಾಷೆಗೆ ಈ ರಿಮೇಕ್ ಚಿತ್ರ ರಿಮೇಕ್ ಆಗಿತ್ತು. ಇದು ಸಿನಿರಂಗದಲ್ಲೇ ಕಾದಂಬರಿ ಆಧರಿಸಿದ ಬಿಗ್ ಹಿಟ್ ಸಿನಿಮಾ ಆಗಿದೆ.
3. ʻಶಂಕರ್ ಗುರುʼ :- ಡಾ.ರಾಜ್ ಕುಮಾರ್ ತ್ರಿಪಾತ್ರದಲ್ಲಿ ನಟಿಸಿದ ʻಶಂಕರ್ ಗುರುʼ ಸಿನಿಮಾ ದೂರದರ್ಶನದಲ್ಲಿ ಮೊದಲು ಪ್ರಸಾರ ಕಂಡಿದೆ. ಇಂದಿಗೂ ಕಲ್ಟ್ ಕ್ಲಾಸಿಕ್ ಅಂತಲೇ ಕರೆಸಿಕೊಳ್ಳುವ ಚಿತ್ರ ಮೂರು ಕೋಟಗೂ ಹೆಚ್ಚು ಹಣ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಗೆ ಪಡೆದಿದೆ.
4. ʻಗಂಧದ ಗುಡಿʼ :- ವರನಟ ಡಾ.ರಾಜ್‌ಕುಮಾರ್ ಅಭಿನಯದ 150ನೇ ಸಿನಿಮಾ ʻಗಂಧದ ಗುಡಿʼ ಅರಣ್ಯ ಸಂರಕ್ಷಣೆ ಕುರಿತ ಮೊದಲ ಚಿತ್ರವಾಗಿದೆ. ಡೈರೆಕ್ಟರ್ ವಿಜಯ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರಣ್ಯ ಸಂರಕ್ಷಣೆಯ ಕುರಿತು ದೃಶ್ಯರೂಪ ಪಡೆದುಕೊಂಡ ಮೊದಲ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಸಲ್ಲುತ್ತದೆ.
5. ʻಮೇಯರ್ ಮುತ್ತಣ್ಣʼ :- ದ್ವಾರಕೀಶ್ ನಿರ್ಮಾಣದ ʻಮೇಯರ್ ಮುತ್ತಣ್ಣʼ ಸಿನಿಮಾದಲ್ಲಿ ಬಿಡುಗಡೆಗೂ ಮೊದಲೇ ವಿತರಣೆ ಹಕ್ಕು ಮಾರಾಟವಾದ ಮೊದಲ ಕನ್ನಡ ಚಿತ್ರವೆಂಬ ಶ್ರೇಯಸ್ಸು ಗಳಿಸಿಕೊಂಡಿದೆ. ಇದರಲ್ಲಿ ಡಾ.ರಾಜ್ ಕುಮಾರ್ ಹಾಗೂ ಭಾರತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.
6. ʻಭಾಗ್ಯದ ಲಕ್ಷ್ಮೀ ಬಾರಮ್ಮʼ :- ಡಾ.ರಾಜ್ ಕುಮಾರ್ ನಟನೆಯ ʻಭಾಗ್ಯದ ಲಕ್ಷ್ಮೀ ಬಾರಮ್ಮʼ ಚಿತ್ರ, ಕನ್ನಡದ ಗಡಿ ದಾಟಿ, ತೆಲುಗು ನೆಲದಲ್ಲಿ ಬಿಡುಗಡೆಗೊಂಡು ಯಶಸ್ಸು ಕಂಡ ಕನ್ನಡದ ಮೊದಲ ಸಿನಿಮಾವಾಗಿದೆ. ಈ ಅಪ್ಪಟ ಹಾಸ್ಯ ಪ್ರಧಾನ ಚಿತ್ರ ಹೈದರಬಾದ್‌ನಲ್ಲಿ ತೆರೆಕಂಡ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.