ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಡಬೇಕಾದರೆ ಊಟಕ್ಕೆ ಮುನ್ನ ಈ ಹಣ್ಣು ಸೇವಿಸಿ ನೋಡಿ !ತಿಂಗಳಾನುಗಟ್ಟಲೆ ಕಾಡುವುದಿಲ್ಲ ಡಯಾಬಿಟೀಸ್
ಮಧುಮೇಹ ರೋಗಿಗಳು ಹಣ್ಣು ಸೇವಿಸಿದರೆ ಬ್ಲಡ್ ಶುಗರ್ ಹೆಚ್ಚಾಗುತ್ತದೆ ಎಂದು ಅನೇಕರು ಹೇಳುತ್ತಾರೆ.ಆದರೆ ಇದು ಎಲ್ಲಾ ಹಣ್ಣುಗಳಿಗೂ ಅನ್ವಯವಾಗುವುದಿಲ್ಲ.
ಕೆಲವೊಂದು ಹಣ್ಣುಗಳೇ ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಲು ಸಹಾಯ ಮಾಡುತ್ತವೆ. ಈ ಹಣ್ಣುಗಳನ್ನು ತಿಂದ ತಕ್ಷಣ ಶುಗರ್ ನಿಯಂತ್ರಣಕ್ಕೆ ಬರುತ್ತದೆ.
ಡ್ರಾಗನ್ ಫ್ರುಟ್ ಮಧುಮೇಹ ರೋಗಿಗಳಿಗೆ ವರದಾನವಿದ್ದ ಹಾಗೆ. ಈ ಹಣ್ಣನ್ನು ಸೇವಿಸಿದ ಕೂಡಲೇ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ ಎನ್ನಲಾಗಿದೆ.
ಅಧ್ಯಯನದ ಪ್ರಕಾರ,ಕೆಂಪು ಅಥವಾ ಗುಲಾಬಿ ಬಣ್ಣವನ್ನು ಹೊಂದಿರುವ ಈ ಹಣ್ಣು, ಮಧುಮೇಹ ವಿರೋಧಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾಗಿ ಡಯಾಬಿಟೀಸ್ ಇರುವವರು ಊಟಕ್ಕೂ ಮುನ್ನ ಈ ಹಣ್ಣನ್ನು ಸೇವಿಸಬೇಕು.
ಡ್ರಾಗನ್ ಹಣ್ಣು ಪ್ರಿಡಿಯಾಬಿಟಿಕ್ ಮತ್ತು ಟೈಪ್ -2 ಮಧುಮೇಹದಿಂದ ಬಳಲುತ್ತಿರುವ ಜನರ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆಯಂತೆ. ಇದರಲ್ಲಿರುವ ಫೈಬರ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದ್ದು, ಶುಗರ್ ಹೆಚ್ಚಾಗಲು ಬಿಡುವುದಿಲ್ಲ.
ಇದು ದೇಹ ತೂಕವನ್ನು ಕಡಿಮೆ ಮಾಡುವಲ್ಲಿಯೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲ ಇರುವ ಕಾರಣ ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.
ಸೂಚನೆ:ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.ZEE NEWS ಅದನ್ನು ಖಚಿತಪಡಿಸುವುದಿಲ್ಲ.