Dream Interpretation:ಕನಸಲ್ಲಿ ದೇವರು ಕಂಡ್ರೆ ಏನರ್ಥ? ಏನ್ ಲಾಭ? ಏನ್ ನಷ್ಟ?
1. ಕನಸಿನಲ್ಲಿ ಶಿವನ ದರ್ಶನ - ಶಿವಲಿಂಗ ಕನಸಿನಲ್ಲಿ ಕಂಡರೆ, ನಿಮ್ಮ ಜೀವನದ ಎಲ್ಲಾ ತೊಂದರೆಗಳು ಕೊನೆಗೊಳ್ಳುತ್ತವೆ ಎಂದರ್ಥ. ಇದರೊಂದಿಗೆ, ನೀವು ಸಾಕಷ್ಟು ಹಣ ಮತ್ತು ಮನ್ನಣೆಯನ್ನು ಪಡೆಯಲಿದ್ದೀರಿ ಎಂಬುದರ ಸಂಕೇತ. ಮತ್ತೊಂದೆಡೆ, ಶಿವನ ನೈಜ ರೂಪವನ್ನು ನೋಡುವುದು ಒಳ್ಳೆಯ ಸಮಯಗಳು ಬರುವ ಸಂಕೇತವಾಗಿದೆ.
2. ಕನಸಿನಲ್ಲಿ ದೇವಿ ದುರ್ಗೆಯ ದರ್ಶನ - ಕನಸಿನಲ್ಲಿ ಕೆಂಪು ಸೀರೆಯುಟ್ಟ ದೇವಿ ದುರ್ಗೆ ಕಾಣಿಸಿಕೊಂಡರೆ, ಅದು ತುಂಬಾ ಮಂಗಳಕರ. ಕುಟುಂಬದ ಜೀವನವೇ ಆಗಲಿಅಥವಾ ವೃತ್ತಿಯಾಗಿರಲಿ, ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅದೃಷ್ಟ ನಿಮ್ಮನ್ನು ಅರಸಿ ಬರಲಿದೆ. ಮತ್ತೊಂದೆಡೆ, ದೇವಿ ದುರ್ಗೆಯೊಂದಿಗೆ ಗರ್ಜಿಸುವ ಸಿಂಹವು ಕಂಡರೆ, ಅದು ಕೆಲವು ಸಮಸ್ಯೆಗಳು ಬರುವ ಸಂಕೇತವಾಗಿದೆ.
3. ಕನಸಿನಲ್ಲಿ ಶ್ರೀರಾಮನ ದರ್ಶನ - ಕನಸಿನಲ್ಲಿ ಶ್ರೀರಾಮ ಕಂಡರೆ, ಅದು ಜವಾಬ್ದಾರಿ ಹೆಚ್ಚಾಗುವ ಸಂಕೇತ. ಇಂತಹ ಕನಸು ಜೀವನದಲ್ಲಿ ಯಶಸ್ಸು ನೀಡುತ್ತದೆ.
4. ಕನಸಿನಲ್ಲಿ ಶ್ರೀಕೃಷ್ಣನ ದರ್ಶನ - ಕನಸಿನಲ್ಲಿ ಕೃಷ್ಣನ ದರ್ಶನವಾಗುವುದು ಜೀವನದಲ್ಲಿ ಪ್ರೇಮ ಗುಲಾಬಿ ಅರಳುವ ಸಂಕೇತ. ಜೊತೆಗೆ ಯಶಸ್ಸಿನತ್ತ ಇದು ಸಂಕೇತಿಸುತ್ತದೆ.
5. ಕನಸಿನಲ್ಲಿ ದೇವಿ ಲಕುಮಿಯ ದರ್ಶನ - ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ದೇವಿ ಲಕ್ಷ್ಮಿಯ ಆಶೀರ್ವಾದ ಪಡೆಯಲು ಹಂಬಲಿಸುತ್ತಾರೆ. ಒಂದು ವೇಳೆ ಲಕ್ಷ್ಮಿ ದೇವಿಯು ಕಮಲದ ಆಸನದ ಮೇಲೆ ಕುಳಿತಿದ್ದರೆ, ಆ ವ್ಯಕ್ತಿಯು ಅಪಾರ ಸಂಪತ್ತನ್ನು ಪಡೆಯುತ್ತಾನೆ. ಒಬ್ಬ ಉದ್ಯಮಿ ಅಂತಹ ಕನಸನ್ನು ಹೊಂದಿದ್ದರೆ, ಅವನು ಸಾಕಷ್ಟು ಹಣವನ್ನು ಗಳಿಸುತ್ತಾನೆ.
6. ಕನಸಿನಲ್ಲಿ ಶ್ರೀ ವಿಷ್ಣುವಿನ ದರ್ಶನ - ಕನಸಿನಲ್ಲಿ ಒಂದು ವೇಳೆ ನಿಮಗೆ ಶ್ರೀವಿಷ್ಣುವಿನ ದರ್ಶನವಾದರೆ, ನಿಮ್ಮ ಭಾಗ್ಯ ಹೊಳೆಯಲಿದೆ ಎಂಬುದರ ಸಂಕೇತ ಇದು. ಇದು ನಿಮಗೆ ಜೀವನದಲ್ಲಿ ದೊಡ್ಡ ಯಶಸ್ಸು ಪ್ರಾಪ್ತಿಯಾಗಲಿದೆ ಎಂಬುದರ ಸಂಕೇತ ಕೂಡ ಹೌದು.