Dream Interpretation: ದುರ್ಗಾ ಮಾತೆಗೆ ಸಂಬಂಧಿಸಿದ ಇಂತಹ ಕನಸುಗಳು ನಿಮ್ಮ ಜೀವನ ಬದಲಾಗುವ ಸಂಕೇತವಂತೆ
ಕನಸಿನಲ್ಲಿ ದೇವರನ್ನು ಕಾಣುವುದು ತುಂಬಾ ಶುಭಕರ. ಅದರಲ್ಲೂ ದುರ್ಗಾ ಮಾತೆಯನ್ನು ಕೆಂಪು ಬಟ್ಟೆಯಲ್ಲಿ ನೋಡಿದರೆ, ನಿಮ್ಮ ಜೀವನದಲ್ಲಿ ಏನಾದರೂ ಒಳ್ಳೆಯದು ಸಂಭವಿಸಲಿದೆ ಎಂದರ್ಥ. ಇದು ಯಶಸ್ಸಿನ ಸೂಚಕವಾಗಿದೆ ಎಂದು ಹೇಳಲಾಗುತ್ತದೆ.
ಅವಿವಾಹಿತ ಹುಡುಗ-ಹುಡುಗಿಯರು ತಮ್ಮ ಕನಸಿನಲ್ಲಿ ತಾಯಿ ದುರ್ಗಾಳನ್ನು ಕೆಂಪು ವಸ್ತ್ರದಲ್ಲಿ ನೋಡಿದರೆ, ಅವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ ಎಂದರ್ಥ.
ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ 4 ರಾಶಿಯವರ ಮೇಲೆ ದುರ್ಗಾ ಮಾತೆಯ ವಿಶೇಷ ಕೃಪೆ
ದುರ್ಗಾ ಮಾತೆ ಕನಸಿನಲ್ಲಿ ಸಿಂಹ ಸವಾರಿ ಮಾಡುತ್ತಿರುವುದನ್ನು ನೋಡಿದರೆ, ಅದು ತುಂಬಾ ಶುಭಕರವಾಗಿದೆ. ಅಂತಹ ಕನಸುಗಳನ್ನು ಕಂಡರೆ ನಿಮ್ಮ ಜೀವನದ ಎಲ್ಲಾ ತೊಂದರೆಗಳು ಕೊನೆಗೊಳ್ಳಲಿವೆ ಎಂದರ್ಥ. ಇದರೊಂದಿಗೆ, ತಾಯಿಯ ಕೃಪೆಯಿಂದ ನಿಮ್ಮ ಶತ್ರುಗಳ ಮೇಲೆ ಜಯವನ್ನು ಪಡೆಯುತ್ತೀರಿ ಎಂದೂ ಕೂಡ ಹೇಳಲಾಗುತ್ತದೆ.
ಇದನ್ನೂ ಓದಿ- Navratri 2021: ನವರಾತ್ರಿಯಲ್ಲಿ ಈ ಗಿಡಗಳನ್ನು ನೆಡುವುದು ಅತ್ಯಂತ ಶುಭ, ದೂರವಾಗುತ್ತೆ ಹಣಕ್ಕೆ ಸಂಬಂಧಿಸಿದ ಸಮಸ್ಯೆ
ನವರಾತ್ರಿಯಲ್ಲಿ ತಾಯಿ ಪಾರ್ವತಿಯನ್ನು ಕನಸಿನಲ್ಲಿ ಕಂಡರೆ, ಅದು ಕೂಡ ಶುಭ ಸಂಕೇತ. ಈ ಕನಸು ಹಣದ ಲಾಭವನ್ನು ಸೂಚಿಸುತ್ತದೆ. ಇದು ನಿಮ್ಮ ಜೀವನ ಬದಲಾಗಲಿದೆ, ನೀವು ಶೀಘ್ರದಲ್ಲೇ ಸಿರಿವಂತರಾಗುವಿರಿ ಎಂದು ಸೂಚಿಸುತ್ತದೆ.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)