ಏಲಕ್ಕಿಯನ್ನು ಇದರಲ್ಲಿ ಬೆರಸಿ ಕುಡಿದರೆ ಕೇವಲ 5 ದಿನದಲ್ಲಿ ಹೊಟ್ಟೆಯ ಬೊಜ್ಜು ಕರಗುತ್ತದೆ!
)
ಏಲಕ್ಕಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿದರೆ ದೇಹಕ್ಕೆ ಅನೇಕ ಲಾಭಗಳಿವೆ.
)
ಏಲಕ್ಕಿ ಆಯುರ್ವೇದ ಮೂಲಿಕೆಯಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಇದು ಸಹಾಯಕವಾಗಿದೆ.
)
ಏಲಕ್ಕಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತದೆ. ದೇಹಕ್ಕೆ ಬೇಕಾದ ಜೀವಸತ್ವಗಳು ಮತ್ತು ಖನಿಜಗಳು ಏಲಕ್ಕಿಯಲ್ಲಿವೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುತ್ತದೆ. ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಗುಣವಾಗುತ್ತವೆ.
ಏಲಕ್ಕಿ ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತದೆ.
ಇದು ಆಂಟಿಫಂಗಲ್ ಗುಣಗಳನ್ನು ಹೊಂದಿದ್ದು, ಬಾಯಿಯ ದುರ್ಗಂಧವನ್ನು ತೊಲಗಿಸುತ್ತದೆ. ಅಲ್ಲದೇ ಹಲ್ಲುಗಳು ಹುಳುಕು ಹಿಡಿಯದಂತೆ ತಡೆಯುತ್ತದೆ.
ಮಹಿಳೆಯರು ಪೀರಿಯಡ್ಸ್ ಸೆಳೆತದಿಂದ ಬಳಲುತ್ತಿದ್ದರೆ, ಏಲಕ್ಕಿ ನೀರನ್ನು ಕೂಡ ಸೇವಿಸಬಹುದು.
ಅತಿಯಾದ ತೂಕ ಮತ್ತು ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೀರು ಕುಡಿಯಬೇಕು. ಇದರಿಂದ ಹೊಟ್ಟೆಯ ಬೊಜ್ಜು ಕರಗಿ ತೂಕ ಇಳಿಕೆಯಾಗುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.