ಮುಂಜಾನೆ ಹಳಸಿದ ಬಾಯಿಗೆ ಈ ಹಣ್ಣಿನ ರಸ ಸೇವಿಸಿದರೆ ದಿನವಿಡೀ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಟ್ರೈ ಮಾಡಿ ನೋಡಿ
ಬೇಸಿಗೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ಕ್ಯಾನ್ಸರ್, ಮಧುಮೇಹ ಮುಂತಾದ ಗಂಭೀರ ಕಾಯಿಲೆಗಳು ದೂರವಾಗುತ್ತವೆ. ಅನೇಕ ಜನರು ನಿಂಬೆ ನೀರನ್ನು ಕುಡಿಯುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
ನಿಂಬೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸಕ್ಕರೆ ಖಾಯಿಲೆ ಇದ್ದರೆ ಲಿಂಬೆಯು ರಾಮಬಾಣಕ್ಕಿಂತ ಕಡಿಮೆಯಿಲ್ಲ, ಏಕೆಂದರೆ ಇದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಮಧುಮೇಹ ರೋಗಿಗಳಿಗೆ ನಿಂಬೆ ತುಂಬಾ ಪ್ರಯೋಜನಕಾರಿ. ನಿಂಬೆ ರಸವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡುತ್ತದೆ.
ಮಧುಮೇಹ ರೋಗಿಗಳಾಗಿದ್ದರೆ ಗ್ರೀನ್ ಟೀ ಮತ್ತು ಬ್ಲಾಕ್ ಟೀಗೆ ನಿಂಬೆ ರಸ ಸೇರಿಸಿ ಕುಡಿಯಿರಿ. ಉಗುರುಬೆಚ್ಚನೆಯ ನೀರಿನಲ್ಲಿ ಸಹ ಬೆರೆಸಿ ಕುಡಿಯಬಹುದು. ಆದರೆ ಇದಕ್ಕೆ ಸಕ್ಕರೆ ಅಥವಾ ಇತರ ಸಿಹಿಕಾರಕಗಳನ್ನು ಸೇರಿಸಬೇಡಿ.
ಒಂದು ಲೋಟ ನಿಂಬೆ ನೀರನ್ನು ಕುಡಿಯುವುದರಿಂದ ಕೇವಲ 45 ನಿಮಿಷಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಅದರಲ್ಲೂ ಬೆಡ್ ಕಾಫಿ ಬದಲಿಗೆ ಇದನ್ನು ಸೇವಿಸುವುದು ಉತ್ತಮ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)