ಈರುಳ್ಳಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು, ಬ್ಲಡ್ ಶುಗರ್ ಎಷ್ಟೇ ಹೆಚ್ಚಿದ್ದರೂ ತಕ್ಷಣ ಕಡಿಮೆಯಾಗುತ್ತದೆ !
ಪ್ರತಿದಿನ ಸಲಾಡ್‌ನಲ್ಲಿ ಹಸಿ ಈರುಳ್ಳಿ ತಿನ್ನಲು ಪ್ರಾರಂಭಿಸಿ. ಸಂಶೋಧನೆಯ ಪ್ರಕಾರ, ಮಧುಮೇಹ ರೋಗಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಈರುಳ್ಳಿ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಈರುಳ್ಳಿ ಕ್ರೋಮಿಯಂ ಮತ್ತು ಸಲ್ಫರ್ ಅನ್ನು ಹೊಂದಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿ ಈರುಳ್ಳಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಸಮೃದ್ಧವಾಗಿದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಹಸಿರು ಈರುಳ್ಳಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುವುದನ್ನು ತಡೆಯುತ್ತದೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಹಠಾತ್ತನೆ ಶುಗರ್ ಲೆವಲ್ ಹೆಚ್ಚಾದರೆ, ಈರುಳ್ಳಿ ರಸವನ್ನು ನಿಂಬೆ ರಸದ ಜೊತೆ ಬೆರೆಸಿ ಕುಡಿದರೆ ಸಕ್ಕರೆಯ ಮಟ್ಟವು ಕೂಡಲೆ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಈರುಳ್ಳಿ ರಸವು ರಕ್ತದಲ್ಲಿನ ಸಕ್ಕರೆಯನ್ನು 50% ರಷ್ಟು ಕಡಿಮೆ ಮಾಡುತ್ತದೆ ಎಂದು ಅಮೆರಿಕಾದಲ್ಲಿ ನಡೆಸಲಾದ ಸಂಶೋಧನೆಯು ಬಹಿರಂಗಪಡಿಸಿದೆ. ಮಧುಮೇಹಿಗಳು ಈರುಳ್ಳಿಯನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.