ಉತ್ತಮ ಆರೋಗ್ಯಕ್ಕಾಗಿ ಕೋಲ್ಡ್ ಡ್ರಿಂಕ್ಸ್ ಬದಲಿಗೆ ಈ ನೈಸರ್ಗಿಕ ಪಾನೀಯಗಳನ್ನು ಸೇವಿಸಿ
ಈ ಸುಡುವ ಬಿಸಿಲಿನಲ್ಲಿ ಶಾಖದಿಂದ ಪರಿಹಾರ ಪಡೆಯಲು ತಂಪು ಪಾನೀಯಗಳ ಸೇವನೆ ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವಿಲ್ಲ. ಆದರೆ, ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಕೋಲ್ಡ್ ಡ್ರಿಂಕ್ಸ್ ಬದಲಿಗೆ ಕೆಲವು ನೈಸರ್ಗಿಕ ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ. ಈ ನೈಸರ್ಗಿಕ ಪಾನೀಯಗಳು ರುಚಿಕರ ಮಾತ್ರವಲ್ಲಾ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅಂತಹ ಪಾನೀಯಗಳ ಬಗ್ಗೆ ತಿಳಿಯೋಣ...
ತುಂಬಾ ಸುಲಭವಾಗಿ, ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ನೈಸರ್ಗಿಕ ಪಾನೀಯಗಳಲ್ಲಿ ಕಬ್ಬಿನಹಾಲು ಕೂಡ ಒಂದು. ಇದು ರುಚಿಕರ ಮಾತ್ರವಲ್ಲ, ದೇಹವನ್ನು ತಂಪಾಗಿಡಲು, ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಪ್ರಯೋಜನಕಾರಿ ಆಗಿದೆ.
ಹಿಂದೆಲ್ಲಾ ಬೇಸಿಗೆ ಕಾಲದಲ್ಲಿ ಯಾರಾದರೂ ಮನೆಗೆ ಬಂದರೆ ಮಜ್ಜಿಗೆ ಕೊಡುವುದು ವಾಡಿಕೆ ಆಗಿತ್ತು. ಇದಕ್ಕೆ ಮುಖ್ಯ ಕಾರಣ, ಬೇಸಿಗೆಯಲ್ಲಿ ದೇಹವನ್ನು ತಾಜಾವಾಗಿರಿಸಲು ಇದು ತುಂಬಾ ಸಹಕಾರಿ. ಮಾತ್ರವಲ್ಲ, ಮಜ್ಜಿಗೆ ಕೊಲೆಸ್ಟ್ರಾಲ್ ನಿಯಂತ್ರಣ, ಉದರ ಸಂಬಂಧಿತ ಸಮಸ್ಯೆಗಳಿಂದ ಪರಿಹಾರ ಪಡೆಯಲು ಕೂಡ ತುಂಬಾ ಪ್ರಯೋಜನಕಾರಿ ಆಗಿದೆ.
ಎಳನೀರು ನ್ಯಾಚುರಲ್ ಹೈಡ್ರೇಟರ್ ಆಗಿದೆ. ಎಳನೀರಿನ ಸೇವನೆಯಿಂದ ಬೆವರಿನ ಮೂಲಕ ಹೊರಹಾಕಲ್ಪಡುವ ಮಾನವ ದೇಹದ ಎಲೆಕ್ಟ್ರೋಲೈಟ್ ನಷ್ಟವನ್ನು ನಿವಾರಿಸಬಹುದು. ಅಷ್ಟೇ ಅಲ್ಲ, ಎಳನೀರು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಫಿಟ್ ಆಗಿರಿಸಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಲೆಮನ್ ಎಂದರೆ ನಿಂಬೆ ಹಣ್ಣು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಇದು ದೇಹವು ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ತುಂಬಾ ಪರಿಣಾಮಕಾರಿ ಪಾನೀಯ ಎಂದು ಪರಿಗಣಿಸಲ್ಪಟ್ಟಿರುವ ನಿಂಬೆ ಜ್ಯೂಸ್ ಅನ್ನು ಬೇಸಿಗೆಯಲ್ಲಿ ಕುಡಿಯುವುದರಿಂದ ಉದರದ ಆರೋಗ್ಯ ಉತ್ತಮವಾಗಿರಲಿದೆ.
ಸೌತೆಕಾಯಿ ನೀರು ವಿಟಮಿನ್‌ಗಳ ಮತ್ತು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಬೇಸಿಗೆಯಲ್ಲಿ ಸೌತೆ ಕಾಯಿ ನೀರನ್ನು ಕುಡಿಯುವುದರಿಂದ ದೇಹವನ್ನು ತಂಪಾಗಿರಿಸಬಹುದು. ಮಾತ್ರವಲ್ಲ, ಇದು ತೂಕ ನಷ್ಟ, ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.