ಮಧುಮೇಹಕ್ಕೆ ಅಮೃತ.. ನಿಂಬೆರಸಕ್ಕೆ ಈ ಪುಟ್ಟ ಕಾಳು ಬೆರೆಸಿ ಕುಡಿದ್ರೆ ಕ್ಷಣಾರ್ಧದಲ್ಲೇ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಶುಗರ್!
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಭಾರತದಲ್ಲಿ ಮಧುಮೇಹ ಉಲ್ಬಣಗೊಳ್ಳುತ್ತಿದೆ ಎಂದರೇ ಅತಿಶಯೋಕ್ತಿಯಲ್ಲ.. ವಯಸ್ಸಿನ ಹೊರತಾಗಿಯೂ, ಪ್ರತಿಯೊಬ್ಬರೂ ೀ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಮ್ಮೆ ಮಧುಮೇಹ ಬಂದರೆ ಜೀವನ ಪೂರ್ತಿ ನರಳಬೇಕು.
ಏಕೆಂದರೇ ಈ ಮಧುಮೇಹಕ್ಕೆ ಇನ್ನೂ ಸರಿಯಾದ ಔಷಧಿ ಇಲ್ಲದಿರುವುದರಿಂದ ಆಹಾರದಿಂದಲೇ ನಿಯಂತ್ರಿಸಬೇಕು. ಒಮ್ಮೆ ಗಮನ ಹರಿಸದೇ ಏನಾದರೂ ತಿಂದರೇ ಸಕ್ಕರೆಯ ಪ್ರಮಾಣವು ಅಗಾಧವಾಗಿ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಹೇಳುವುದಾದರೇ ಮಧುಮೇಹಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ. ಹಾಗಾಗಿ ದಿನದ ಆರಂಭದಲ್ಲಿ ತೆಗೆದುಕೊಳ್ಳುವ ಆಹಾರದ ಬಗ್ಗೆ ಎಚ್ಚರದಿಂದಿರಬೇಕು.
ಇನ್ನು ಚಿಯಾ ಬೀಜಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.. ನಿಂಬೆ ರಸ ಕೂಡ ಮಧುಮೇಹವನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಇವು ಶುಗರ್ ಲೆವೆಲ್ ಕಡಿಮೆ ಮಾಡಲು ತುಂಬಾ ಸಹಾಯ ಮಾಡುತ್ತವೆ.
ನಿಂಬೆ ರಸದಲ್ಲಿ ಚಿಯಾ ಬೀಜಗಳು ಮತ್ತು ಜೇನುತುಪ್ಪವನ್ನು ಬೆರೆಸಿ ಬೆಳಿಗ್ಗೆ ಬೇಗನೆ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇವು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸುಧಾರಿಸಿ.. ಹೊಟ್ಟೆ ತುಂಬಾ ಹೊತ್ತು ತುಂಬುವಂತೆ ಮಾಡುತ್ತದೆ. ಇದರಿಂದ ಕಡಿಮೆ ಉಪಹಾರ ಸೇವಿಸಬಹುದು.. ಪರಿಣಾಮವಾಗಿ, ಸಕ್ಕರೆಯ ಪ್ರಮಾಣವು ಹೆಚ್ಚಾಗುವುದಿಲ್ಲ. ಬೆಳಿಗ್ಗೆ ಮತ್ತು ಸಂಜೆ ಒಂದು ಲೋಟ ಈ ಪಾನೀಯವು ತುಂಬಾ ಒಳ್ಳೆಯದು.
ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಔಷಧಿಗಳು ಮತ್ತು ಆರೋಗ್ಯ ಸಂಬಂಧಿತ ಸಲಹೆಯು ತಜ್ಞರೊಂದಿಗಿನ ಸಂಭಾಷಣೆಯನ್ನು ಆಧರಿಸಿದೆ. ಇದು ಸಾಮಾನ್ಯ ಮಾಹಿತಿಯಾಗಿದೆ. ವೈಯಕ್ತಿಕ ಸಲಹೆಯಲ್ಲ. ಆದ್ದರಿಂದ, ವೈದ್ಯರನ್ನು ಸಂಪರ್ಕಿಸಿದ ನಂತರವೇ ಯಾವುದನ್ನಾದರೂ ಬಳಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.