ವ್ಯಾಯಾಮ ಮಾಡುವ ಮುನ್ನ ಕಾಫಿ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ

Wed, 21 Oct 2020-2:55 pm,

ನವದೆಹಲಿ: ಸಾಮಾನ್ಯವಾಗಿ ನೀವು ತಾಜಾತನಕ್ಕಾಗಿ ಕಾಫಿ ಕುಡಿಯುತ್ತೀರಿ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಕಾಫಿಯನ್ನು ಸೇವಿಸುತ್ತೀರಿ. ನೀವು ಸಹ ಕಾಫಿ ಪ್ರಿಯರಲ್ಲಿ ಒಬ್ಬರಾಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಕಾಫಿ ಅನೇಕ ರೋಗಗಳ ವಿರುದ್ಧ ಹೋರಾಡಲು ಪ್ರಯೋಜನಕಾರಿಯಾಗಿದೆ. ಪ್ರತಿದಿನ 3 ರಿಂದ 4 ಕಪ್ ಕಾಫಿ ಕುಡಿಯುವುದರಿಂದ ನಿಮ್ಮ ಹೃದಯದ ಆರೋಗ್ಯವನ್ನು ಸುಧಾರಿಸಬಹುದು ಮತ್ತು ಮೆಟಾಬಾಲಿಕ್ ಸಿಂಡ್ರೋಮ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡಬಹುದು. ನೀವು ಸದೃಢವಾಗಿರಲು ವ್ಯಾಯಾಮ ಮಾಡಿದರೆ, ವ್ಯಾಯಾಮದ ಮೊದಲು ಕಾಫಿ ಕುಡಿಯುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಬನ್ನಿ, ಅವುಗಳ ಬಗ್ಗೆ ತಿಳಿಯೋಣ... ಕಾಫಿಯಲ್ಲಿರುವ ಕೆಫೀನ್ ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.

ಸಾಮಾನ್ಯವಾಗಿ ವ್ಯಾಯಾಮದ ನಂತರ ಸೌಮ್ಯ ಸ್ನಾಯು ನೋವು  ಅನುಭವವಾಗುತ್ತದೆ. ವ್ಯಾಯಾಮ ಮಾಡುವ ಮೊದಲು ಕಾಫಿ ಕುಡಿಯುವ ಜನರಿಗೆ ಕಡಿಮೆ ಸ್ನಾಯು ನೋವು ಇರುತ್ತದೆ. ಕ್ರೀಡಾಪಟುಗಳ ಸ್ನಾಯುಗಳಿಗೆ ಕಾಫಿಯನ್ನು ಇಂಧನವಾಗಿಯೂ ಪರಿಗಣಿಸಲಾಗಿದೆ.

ನಿಯಮಿತವಾಗಿ ಕಾಫಿ ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ನಂಬಲಾಗಿದೆ. ಇದರ ಹಿಂದಿನ ಕಾರಣವೆಂದರೆ ಕೆಫೀನ್ ಅಡ್ರಿನಾಲಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಸ್ನಾಯು ಮತ್ತು ಹೃದಯ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಕಠಿಣ ವ್ಯಾಯಾಮ ಮಾಡುವಾಗ ಮಾನಸಿಕ ಗಮನ ಮತ್ತು ಹೆಚ್ಚುವರಿ ಶಕ್ತಿಯ ಅಗತ್ಯವಿರುತ್ತದೆ. ಒಂದು ಕಪ್ ಕಾಫಿ ಕುಡಿಯುವುದರಿಂದ ಅವೆರಡರ ಅಗತ್ಯವನ್ನು ಪೂರೈಸುತ್ತದೆ ಮತ್ತು ಕಾಫಿ ಕುಡಿಯುವವರ ನೆನಪಿನ ಶಕ್ತಿ ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ.  

ಕಾಫಿಯಲ್ಲಿ ಇಷ್ಟೆಲ್ಲಾ ಉಪಯೋಗಗಳಿದ್ದರೂ ಸಹ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಕಾಫಿ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link