ಈ ಬೀಜ ನೆನೆಸಿದ ನೀರು ಕುಡಿದರೆ ಸಾಕು, ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್ ಆಸಿಡ್ ಕರಗಿ ನೀರಾಗಿ ಹೋಗುವುದು!
ದೇಹದಲ್ಲಿ ಯೂರಿಕ್ ಆಸಿಡ್ ಅಧಿಕವಾಗುವುದರಿಂದ ಸಂಧಿವಾತ ಸಮಸ್ಯೆ ಉಂಟಾಗುತ್ತದೆ. ನಿಮ್ಮ ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಬೀಜವು ನಿಮ್ಮ ಸಮಸ್ಯೆಗೆ ಔಷಧಿಯಂತೆ ಕೆಲಸ ಮಾಡುತ್ತದೆ.
ಅಗಸೆ ಬೀಜಗಳು ಯೂರಿಕ್ ಆಸಿಡ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಯೂರಿಕ್ ಆಸಿಡ್ ನಿಯಂತ್ರಿಸಲು ಅಗಸೆ ಬೀಜಗಳನ್ನು ಅಗಿದು ಸಹ ತಿನ್ನಬಹುದು.
ಅಗಸೆ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ಇದು ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಗಸೆ ಬೀಜ ನೆನೆಸಿಟ್ಟು, ಅದು ಜೆಲ್ ರೀತಿಯಾದಾಗ ಅದನ್ನು ಸೇವಿಸಬೇಕು. ಇದು ಯೂರಿಕ್ ಆಸಿಡ್ ಮಟ್ಟವನ್ನು ಕೂಡಲೇ ತಗ್ಗಿಸುತ್ತದೆ. ಮೊಣಕಾಲುಗಳ ನಡುವಿನ ಮೂಳೆಗಳ ಸವೆತದಿಂದ ಉಂಟಾಗುವ ನೋವಿನಿಂದ ಪರಿಹಾರವನ್ನು ನೀಡುತ್ತವೆ.
ಅಗಸೆಬೀಜಗಳು ಹೇರಳವಾದ ಫೈಬರ್, ಒಮೆಗಾ 6 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಬೊಜ್ಜು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
ಅಗಸೆ ಬೀಜಗಳನ್ನು ಹುರಿದು ರುಬ್ಬಿಕೊಂಡು ತಿನ್ನಬಹುದು ಅಥವಾ ಕುದಿಸಿ ನೀರು ಕುಡಿಯಬಹುದು. ಕೀಲು ನೋವು ಮತ್ತು ಯೂರಿಕ್ ಆಸಿಡ್ ಮಾತ್ರವಲ್ಲದೆ ಮಧುಮೇಹದಂತಹ ಕಾಯಿಲೆಗಳಿಗೆ ಅಗಸೆ ಬೀಜ ಪರಿಹಾರ ನೀಡುತ್ತದೆ.
ಅಗಸೆ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಮತ್ತು ಮರುದಿನ ಅದನ್ನು ಕುದಿಸಿ. ನಂತರ ಅನ್ನು ಸೇವಿಸಿ. ಊಟವಾದ ಅರ್ಧ ಘಂಟೆಯ ನಂತರ ಪ್ರತಿದಿನ ಒಂದು ಚಮಚವನ್ನು ಅಗಸೆ ಅಗಿಯಿರಿ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.