ಹೆಚ್ಚಿನ ಬಿಸಿ ನೀರಿನ ಸೇವನೆಯಿಂದ ಏನ್ ಅಗುತ್ತೆ ಗೊತ್ತಾ..? ಈ ತಪ್ಪು ಮಾಡಿದರೆ ಲಿವರ್ ಫೇಲ್ಯೂರ್ ಆಗೋದು ಖಂಡಿತಾ..!
ನೀರು ಮಾನವ ಜೀವನದ ಪ್ರಮುಖ ಭಾಗವಾಗಿದೆ. ಅದು ಇಲ್ಲದೆ ಬದುಕುವುದು ಕಷ್ಟ. ಆದರೆ ಬಿಸಿ ನೀರು ಲಿವರ್ ಗೆ ಹಾನಿ ಮಾಡುತ್ತದೆ ಎನ್ನುವುದು ಕೆಲವರ ವಾದ. ಆದರೆ, ಇದು ಎಷ್ಟು ನಿಜ.. ಈಗ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಮುಂದೆ ಓದಿ...
ನೀರು ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹವು ಆರೋಗ್ಯವಾಗಿರಲು ದಿನಕ್ಕೆ ಎರಡು ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಸೂಚಿಸುತ್ತಾರೆ. ಬಿಸಿ ನೀರು ಕುಡಿಯುವುದು ಕೂಡ ಒಳ್ಳೆಯದು ಎನ್ನುತ್ತಾರೆ.
ಆದರೆ ಹೆಚ್ಚು ಬಿಸಿ ನೀರು ಕುಡಿದರೆ ಯಕೃತ್ತು ಹಾಳಾಗುತ್ತದೆ ಎನ್ನುವುದು ಕೆಲವರ ವಾದ. ಅನೇಕ ಜನರು ಬಿಸಿನೀರನ್ನು ಕುಡಿಯುವುದಿಲ್ಲ ಏಕೆಂದರೆ ಅದು ಅವರ ಯಕೃತ್ತಿಗೆ ಹಾನಿ ಮಾಡುತ್ತದೆ ಎಂದು ಭಾವಿಸುತ್ತಾರೆ. ವಾಸ್ತವವಾಗಿ, ಇದರಲ್ಲಿ ಯಾವುದೇ ಸತ್ಯವಿಲ್ಲ.
ತಜ್ಞರ ಪ್ರಕಾರ ಬಿಸಿ ನೀರು ಲಿವರ್‌ಗೆ ಹಾನಿ ಮಾಡುವುದಿಲ್ಲ. ಮತ್ತೊಂದೆಡೆ ಬಿಸಿನೀರು ದೇಹವನ್ನು ಹೈಡ್ರೇಟ್ ಆಗಿ ಇರಿಸುತ್ತದೆ ಮತ್ತು ಇದು ಆರೋಗ್ಯಕ್ಕೆ ಒಳ್ಳೆಯದು. ಬಿಸಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.
ಇದು ದೇಹದಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಷ್ಟೆ ಅಲ್ಲದೆ ಬಿಸಿನೀರು ಬೊಜ್ಜು ಕಡಿಮೆ ಮಾಡುತ್ತದೆ. ಒಟ್ಟಿನಲ್ಲಿ ಬಿಸಿ ನೀರು ಯಕೃತ್ತಿನ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುವ ಊಹಾಪೋಹಗಳಲ್ಲಿ ಯಾವುದೇ ಸತ್ಯಾಂಶವಿಲ್ಲ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.