ನಿಮಗೆ ಹೆಚ್ಚು ಹಾಲು ಕುಡಿಯುವ ಅಭ್ಯಾಸ ಇದೆಯಾ..? ಹಾಗಾದರೆ ಇಂದೇ ಕಡಿಮೆ ಮಾಡಿ..ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

Mon, 05 Aug 2024-9:54 am,

ಪ್ರತಿದಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ಗೊತ್ತು. ಒಂದು ಲೋಟ ಹಾಲಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ, ಇದು ಬಲವಾದ ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಂಬಂಧಿಸಿದ ಪೋಷಕಾಂಶಳನ್ನು ಒಳಗೊಂಡಿದೆ. ಪ್ರತಿ ಮನೆಯಲ್ಲಿ ಹಾಲು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೆ ಹೆಚ್ಚು ಹಾಲು ಕುಡಿಯುವುದು ಅಪಾಯಕಾರಿ..!ಹೆಚ್ಚು ತಿಳಿಯಲು ಮುಂದೆ ಓದಿ...

ಹಾಲು ಆರೋಗ್ಯಕರ ಮತ್ತು ಪೌಷ್ಟಿಕವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ದಿನದಲ್ಲಿ ಪ್ರಮಾಣಕ್ಕಿಂತ ಹೆಚ್ಚು ಕುಡಿದರೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಎನ್ನುತ್ತಾರೆ ತಜ್ಞರು. ಅವಶ್ಯಕತೆಗಿಂತಲೂ ಹೆಚ್ಚು ನೀವು ಏನನ್ನೇ ಸೇವಿಸಿದರು ಅದು ಅಪಾಯ. ಹಾಲಿನಂತೆ ಆರೋಗ್ಯಕರವಾಗಿದ್ದರೂ ಅದು ದೇಹಕ್ಕೆ ಕಂಡಿತ ಹಾನಿ ಮಾಡುತ್ತದೆ. ಸ್ವೀಡಿಷ್ ಅಧ್ಯಯನದ ಪ್ರಕಾರ, ಒಂದು ದಿನದಲ್ಲಿ ಹೆಚ್ಚು ಹಾಲು ಕುಡಿಯುವುದು ಸಾವು ಮತ್ತು ಮೂಳೆ ಮುರಿತದ ಅಪಾಯವನ್ನು ಹೆಚ್ಚಿಸುತ್ತದೆಯಂತೆ.  

ಹಾಲು ಪೌಷ್ಟಿಕಾಂಶದ ಶಕ್ತಿ ಕೇಂದ್ರವಾಗಿದೆ. ಕ್ಯಾಲ್ಸಿಯಂ ಜೊತೆಗೆ, ಇದು ವಿಟಮಿನ್ ಡಿ, ವಿಟಮಿನ್ ಬಿ 12 ಮತ್ತು ಪ್ರೋಟೀನ್‌ನಂತಹ ಇತರ ಪ್ರಮುಖ ಪೋಷಕಾಂಶಗಳಿಂದ ಸಮೃದ್ದವಾಗಿದೆ. ಪ್ರತಿದಿನ ಹಾಲು ಕುಡಿಯುವುದರಿಂದ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಮಿತವಾಗಿ ಸೇವನೆಯು ಪ್ರಯೋಜನಕಾರಿಯಾಗಿದೆ. ಆದರೆ ಅತಿಯಾಗಿ ಸೇವಿಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗಬಹುದು.  

ಸಂಶೋಧಕರ ಪ್ರಕಾರ, ದಿನಕ್ಕೆ ಮೂರು ಲೋಟಗಳಿಗಿಂತ ಹೆಚ್ಚು ಹಾಲು ಕುಡಿಯುವುದು ದು ಅದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ, ಪ್ರತಿದಿನ ಒಂದು ಲೋಟಕ್ಕಿಂತ ಕಡಿಮೆ ಕುಡಿಯುವವರಿಗೆ ಹೋಲಿಸಿದರೆ ಪ್ರತಿದಿನ ಮೂರು ಅಥವಾ ಹೆಚ್ಚಿನ ಗ್ಲಾಸ್ ಹಾಲು ಕುಡಿಯುವುದು ಸಾವಿನ ಅಪಾಯವನ್ನು ದ್ವಿಗುಣವಾಗಿದೆ.   

ಹೆಚ್ಚು ಹಾಲು ಕುಡಿಯುವುದರಿಂದ ಕರುಳಿನ ಸೋರಿಕೆಗೆ ಕಾರಣವಾಗಬಹುದು ಎಂದು ಅಧ್ಯಯನವು ಸೂಚಿಸುತ್ತದೆ, ಇದು ಆಲಸ್ಯಕ್ಕೆ ಕಾರಣವಾಗುತ್ತದೆ. ಏಕೆಂದರೆ ಹಾಲು ಎ1 ಕ್ಯಾಸೀನ್ ಅನ್ನು ಹೊಂದಿರುತ್ತದೆ, ಇದು ಕರುಳಿನ ಒಳಪದರದ ಮೇಲೆ ಉರಿಯೂತದ ಪರಿಣಾಮವನ್ನು ಬೀರುತ್ತದೆ. ಜೀರ್ಣಕಾರಿ ಸಮಸ್ಯೆಗಳಿಗೆ ಸಹ ಕೊಡುಗೆ ನೀಡುತ್ತದೆ. ಮಿತಿಮೀರಿದ ಸೇವನೆಯು ಸೆಳೆತ ಅಥವಾ ಅತಿಸಾರಕ್ಕೆ ಕಾರಣವಾಗಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link