ಊಟದ ನಡುವೆ ನೀರು ಕುಡಿಯುತ್ತೀರಾ? ಬ್ಲಡ್ ಶುಗರ್ ಹೆಚ್ಚಾಗುವುದರ ಜೊತೆಗೆ ಈ ಸಮಸ್ಯೆಗಳಿಗೂ ಕಾರಣವಾಗಬಹುದು!
ಊಟ ಮಾಡುವಾಗ ನೀರು ಕುಡಿಯುವುದು, ವಿಶೇಷವಾಗಿ ತಣ್ಣೀರು ಕುಡಿಯುವುದು ಅಗತ್ಯ ಎಂದು ಕೆಲವರು ಭಾವಿಸುತ್ತಾರೆ. ಆದರೆ, ನಿಮ್ಮ ಈ ಅಭ್ಯಾಸ ಆರೋಗ್ಯಕ್ಕೆ ಅಪಾಯಕಾರಿ ಆಗಿದೆ. ಇದರಿಂದಾಗುವ ಅಡ್ಡಪರಿಣಾಮಗಳೆಂದರೆ...
ಆಹಾರದ ಮಧ್ಯೆ ನೀರು ಕುಡಿಯುವುದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟದಲ್ಲಿ ಉಲ್ಬಣಕ್ಕೆ ಕಾರಣವಾಗಬಹುದು. ಇದು ಒಟ್ಟಾರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ.
ಆಹಾರದ ನಡುವೆ ನೀರು ಕುಡಿಯುವುದರಿಂದ ಇದು ಜೀರ್ಣಕಾರಿ ಕಿಣ್ವಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು.
ಲಾಲಾರಸವು ಜೀರ್ಣಕ್ರಿಯೆಗೆ ತುಂಬಾ ಮುಖ್ಯ. ಆದರೆ, ಊಟದ ಸಮಯದಲ್ಲಿ ನೀರು ಕುಡಿಯುವುದರಿಂದ ನಿಮ್ಮ ಲಾಲಾರಸವು ದುರ್ಬಲಗೊಳ್ಳುತ್ತದೆ.
ಊಟದ ಜೊತೆಗೆ ನೀರು ಕುಡಿಯುವ ಅಭ್ಯಾಸ ಇರುವವರಲ್ಲಿ ತೂಕ ಹೆಚ್ಚಳ ಸಾಮಾನ್ಯವಾಗಿ ಕಾಡುವ ದೊಡ್ಡ ಸಮಸ್ಯೆ ಆಗಿದೆ.
ಆಹಾರ ಸೇವನೆಯ ನಡುವೆ ನೀರು ಕುಡಿಯುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ.
ಊಟ ಸೇವಿಸುಯಾಗ ಮಧ್ಯೆ ನೀರು ಕುಡಿಯುವ ಅಭ್ಯಾಸವು ಆಸಿಡ್ ರಿಫ್ಲಕ್ಸ್ ಮತ್ತು ಹೃದಯ ಉರಿಯುವಿಕೆ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲಿ ಒಂದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.