Drinks For Heat Wave:ಬೇಸಿಗೆಯ ಬೇಗೆಯಿಂದ ಪಾರಾಗಲು ಈ ಪಾನೀಯಗಳನ್ನು ಟ್ರೈ ಮಾಡಿ, ತಕ್ಷಣ ಪರಿಹಾರ ಸಿಗಲಿದೆ
1. ಹಣ್ಣುಗಳ ನೀರು - ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕುವುದರಿಂದ ಅದರಲ್ಲಿನ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ ಹಾಗೂ ಅದು ನಮ್ಮ ದೇಹದ ಹೈಡ್ರೇಶನ್ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹಣ್ಣುಗಳ ನೀರು ನಮ್ಮ ದೇಹಕ್ಕೆ ಒಂದು ಉತ್ತಮ ಆರೋಗ್ಯಕರ ಆಯ್ಕೆ ಸಾಬೀತಾಗುವ ಸಾಧ್ಯತೆ ಇದೆ.
2. ನಿಂಬೆ ನೀರು - ನಿಂಬೆ ನೀರನ್ನು ಅತಿ ಹೆಚ್ಚು ಹೈಡ್ರೇಟೆಡ್ ಪಾನೀಯ ಎಂದು ಪರಿಗಣಿಸಲಾಗುತ್ತದೆ. ಒಂದು ಗ್ಲಾಸ್ ನೀರಿನಲ್ಲಿ ಎರಡು ನಿಂಬೆ ಹಾಗೂ ಚಿಟಿಕೆ ಉಪ್ಪು ಹಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಸಿ ಸಿಗುತ್ತದೆ ಹಾಗೂ ಶರೀರದ ನೀರಿನ ಕೊರತೆ ನೀಗುತ್ತದೆ.
3. ಆಲೋವೆರಾ ನೀರು - ಅಲೋವೆರಾ ನೀರು ಬೇಸಿಗೆಯಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಇದಲ್ಲದೇ ಇದನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ತ್ವಚೆಯು ಹೊಳಪನ್ನು ಪಡೆದುಕೊಳ್ಳುತ್ತದೆ.
4. ಕ್ಯಾಫಿನ್ ರಹಿತ ಚಹಾ - ಕ್ಯಾಫಿನ್ ರಹಿತ ಚಹಾ ಕೂಡ ಹೈಡ್ರೇಟೆಡ್ ಆಗಿರಲು ಒಂದು ಉತ್ತಮ ಆಯ್ಕೆಯಾಗಿದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ನೀವು ಕಪ್ಪು, ಹಸಿರು ಅಥವಾ ಗಿಡಮೂಲಿಕೆ ಚಹಾವನ್ನು ಶಾಮೀಲುಗೊಳಿಸಬಹುದು. ಇದರ ಆಂಟಿಆಕ್ಸಿಡೆಂಟ್ ಗುಣಗಳು ನಮ್ಮ ಆರೋಗ್ಯಕ್ಕೆತುಂಬಾ ಪ್ರಯೋಜನಕಾರಿಯಾಗಿವೆ
5. ಎಳನೀರು - ಎಳನೀರು ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿ ಎಂದು ಸಾಬೀತಾಗುತ್ತದೆ. ಬೇಸಿಗೆಯಲ್ಲಿ, ನಮಗೆ ದಣಿದ ಅನುಭವವಾದಾಗ, ಎಳನೀರು ದೇಹಕ್ಕೆ ಶಕ್ತಿ ನೀಡುವ ಕೆಲಸ ಮಾಡುತ್ತದೆ.