Belly Fat: ನೈಸರ್ಗಿಕವಾಗಿ ಹೊಟ್ಟೆಯ ಫ್ಯಾಟ್ ಕರಗಿಸಲು ಪ್ರತಿದಿನ ಬೆಳಿಗ್ಗೆ ಈ ಪಾನೀಯಗಳನ್ನು ಸೇವಿಸಿ
ತೂಕ ಇಳಿಕೆಯಲ್ಲಿ ದೊಡ್ಡ ಸವಾಲು ಬೆಲ್ಲಿ ಫ್ಯಾಟ್ ಕರಗಿಸುವುದು. ಆದರೆ, ನಿತ್ಯ ಮುಂಜಾನೆ ಕೆಲವು ಪಾನೀಯಗಳ ಸೇವನೆಯು ಬೆಲ್ಲಿ ಫ್ಯಾಟ್ ಕರಗಿಸಲು ವರದಾನವಿದ್ದಂತೆ ಎನ್ನಲಾಗುತ್ತದೆ.
ಹೌದು, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು ಸವಿಯುವುದರಿಂದ ನೈಸರ್ಗಿಕವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು ಎನ್ನಲಾಗುತ್ತದೆ. ಅಂತಹ ಪಾನೀಯಗಳೆಂದರೆ...
ಲೆಮನ್ ವಾಟರ್: ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಬೆರೆಸಿದ ನೀರನ್ನು ಕುಡಿಯುವುದರಿಂದ ಇದು ಚಯಾಪಚಯವನ್ನು ಹೆಚ್ಚಿಸಿ ಹೊಟ್ಟೆಯ ಸುತ್ತಲಿನ ಫ್ಯಾಟ್ ಕರಗಿಸಲು ಸಹಕಾರಿ ಆಗಿದೆ.
ಸೌತೆಕಾಯಿ ನೀರು: ಕಡಿಮೆ ಕ್ಯಾಲೋರಿ ಜೊತೆಗೆ ಉರಿಯೂತವನ್ನು ಕಡಿಮೆ ಮಾಡಬಲ್ಲ ಸೌತೆಕಾಯಿಯ ನೀರನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿ, ಹೊಟ್ಟೆಯನ್ನು ಚಪ್ಪಟೆಯಾಗಿಸಬಹುದು.
ಶುಂಠಿ ನೀರು: ನೈಸರ್ಗಿಕ ಹಸಿವು ನಿವಾರಕವಾಗಿರುವ ಶುಂಠಿ ನೀರನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಿ, ಕೆಲವೇ ದಿನಗಳಲ್ಲಿ ಸ್ಲಿಮ್ ಬೆಲ್ಲಿ ನಿಮ್ಮದಾಗಿಸಲು ಪ್ರಯೋಜನಕಾರಿ ಆಗಿದೆ.
ಪುದೀನ ನೀರು: ನಿತ್ಯ ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರಿನ ಸೇವನೆಯು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಬೆಲ್ಲಿ ಫ್ಯಾಟ್ ಕರಗಿಸಲು ಉತ್ತಮ ಪಾನೀಯ ಎನ್ನಲಾಗುತ್ತದೆ.
ಮೆಂತ್ಯ ನೀರು: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಕುಡಿಯುವುದಾರಿಂದ ಇದು ಹಸಿವನ್ನು ನಿಯಂತ್ರಿಸಿ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.