ಜಿಮ್‌ಗೆ ಹೋಗುವುದೇ ಬೇಡ, ಈ ನೈಸರ್ಗಿಕ ಪಾನೀಯಗಳಿಂದ ಒಂದೇ ವಾರದಲ್ಲಿ ಕರಗಿಸಿ ಬೆಲ್ಲಿ ಫ್ಯಾಟ್!
ತೂಕ ಇಳಿಕೆಗಾಗಿ ಪ್ರತ್ನಿಸುವವರಿಗೆ ಯೋಗ, ವ್ಯಾಯಾಮ, ಜಿಮ್ ಅವಶ್ಯಕವೇ ಆದರೂ, ನೀವು ಇದಾವುದೂ ಇಲ್ಲದೆ ಸುಲಭವಾಗಿ ತೂಕ ಇಳಿಸಬಹುದು.
ಮಹಿಳೆಯರಿಗೆ ಹೆಚ್ಚು ಸವಾಲೆನಿಸುವ ಬೆಲ್ಲಿ ಫ್ಯಾಟ್ ಕರಗಿಸಲು ಕೆಲವು ನೈಸರ್ಗಿಕ ಪಾನೀಯಗಳು ಅತ್ಯುತ್ತಮ ಮದ್ದು ಎಂತಲೇ ಹೇಳಬಹುದು.
ಒಂದೆರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ.
ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಪ್ರತಿದಿನ ಕುಡಿಯುವುದರಿಂದ ಒಂದೇ ವಾರದಲ್ಲಿ ನಿಮಗೆ ಪರಿಣಾಮ ಗೋಚರಿಸುತ್ತದೆ.
ನಿತ್ಯ ಬೆಳಿಗ್ಗೆ ಒಂದು ತುಂಡು ಶುಂಠಿ ಹಾಕಿ ತಯಾರಿಸಿದ ಕಷಾಯ ಕುಡಿಯುವುದರಿಂದ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಮಾಯವಾಗುತ್ತದೆ.
ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಂತ್ಯ ನೆನೆಯಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುತ್ತಾ ಬಂದರೆ ಆರೋಗ್ಯಕರ ತೂಕ ಇಳಿಕೆಯೊಂದಿಗೆ ಹೊಟ್ಟೆಯನ್ನೂ ಕರಗಿಸಬಹುದು.
ನಿತ್ಯ ಪುದೀನಾ ಮಿಶ್ರಿತ ನೀರನ್ನು ಕುಡಿಯುವುದಾರಿದ್ನ ಅಜೀರ್ಣ ಸಮಸ್ಯೆಗಳು ನಿವಾರಣೆಯಾಗಿ, ಜೀರ್ಣಾಂಗ ವ್ಯವಸ್ಥೆ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲ, ಕೆಲವೇ ದಿನಗಳಲ್ಲಿ ಹೊಟ್ಟೆಯು ಕೂಡ ಫ್ಲಾಟ್ ಆಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.