7 ಸಾವಿರದಷ್ಟು ಕುಸಿತ ಕಂಡ ಬಂಗಾರದ ಬೆಲೆ !ಈ ಮಟ್ಟದ ಇಳಿಕೆಯ ಹಿಂದಿನ ಗುಟ್ಟು ಇದೇ!
ಮಹಿಳೆಯರಿಗೆ ಸಂತಸದ ಸುದ್ದಿ. ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ. ಚಿನ್ನದ ಬೆಲೆ ಕುಸಿಯಲು ಕಾರಣಗಳನ್ನು ನೋಡೋಣ.
ಡಿಸೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ಬಹುತೇಕ ಕುಸಿದಿದೆ.ಕಳೆದ ತಿಂಗಳು ನವೆಂಬರ್ ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿದ್ದು, ಸುಮಾರು 84 ಸಾವಿರ ರೂಪಾಯಿ ದಾಟಿತ್ತು. ಆಗಿನ ಬೆಲೆಗೆ ಹೋಲಿಸಿದರೆ ಈಗ ಚಿನ್ನದ ಬೆಲೆ ಸುಮಾರು 77 ಸಾವಿರ ರೂ.ಗೆ ಇಳಿಕೆಯಾಗಿದೆ. ಅಂದರೆ ಒಂದು ತಿಂಗಳಲ್ಲಿ ಚಿನ್ನದ ಬೆಲೆಯಲ್ಲಿ ಸುಮಾರು 7 ಸಾವಿರ ರೂಪಾಯಿ ಕಡಿಮೆಯಾದ ಹಾಗೆ ಆಗಿದೆ.
ಚಿನ್ನದ ದರಗಳ ಕುಸಿತಕ್ಕೆ ಮುಖ್ಯವಾಗಿ ಅಂತಾರಾಷ್ಟ್ರೀಯ ಬೆಳವಣಿಗೆಗಳು ಕಾರಣವೆಂದು ಹೇಳಬಹುದು. ಏಕೆಂದರೆ ಅಮೆರಿಕದಲ್ಲಿ ಡಾಲರ್ ಬಲಗೊಳ್ಳುತ್ತಿದ್ದಂತೆ ಚಿನ್ನದ ಬೆಲೆ ಕುಸಿಯಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಮೆರಿಕ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆಯುವ ಸಾಧ್ಯತೆ ಇರುವುದು ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ. ಇದರಿಂದಾಗಿ ಹೂಡಿಕೆದಾರರು ನಿಧಾನವಾಗಿ ತಮ್ಮ ಹೂಡಿಕೆಯನ್ನು ಚಿನ್ನದಿಂದ ಷೇರು ಮಾರುಕಟ್ಟೆಗೆ ಬದಲಾಯಿಸುತ್ತಿದ್ದಾರೆ.
ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಅಪಾಯ ಕಡಿಮೆ ಎಂದು ಹಿಂದೆ ಬಂಗಾರದ ಮೇಲೆ ಹೂಡಿಕೆ ಮಾಡಲಾಗುತ್ತಿತ್ತು. ಆದರೆ ಷೇರುಪೇಟೆಯಲ್ಲಿ ಚಿನ್ನಕ್ಕಿಂತ ಹೆಚ್ಚಿನ ಆದಾಯವಿರುವ ಹಿನ್ನೆಲೆಯಲ್ಲಿ ಇದೀಗ ಆ ನಿಟ್ಟಿನಲ್ಲಿ ಹೂಡಿಕೆಗೆ ಜನ ಮುಂದಾಗಿದ್ದಾರೆ.
ದೇಶೀಯ ಹಬ್ಬದ ಸೀಸನ್ ಮುಗಿದಿದ್ದು, ಮದುವೆ, ಶುಭ ಸಮಾರಂಭಗಳ ಸೀಸನ್ ಕಡಿಮೆಯಾಗುತ್ತಿದ್ದಂತೆ ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತದೆ. ಫೆಬ್ರವರಿ ತಿಂಗಳಲ್ಲಿ ಬಂಗಾರದ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇಂದಿನ 77,625 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 71,115 ರೂ.ಆಗಿದೆ.
ಈ ಸುದ್ದಿ ಬರೆಯುವ ಸಮಯದಲ್ಲಿನ ಮಾರುಕಟ್ಟೆ ಬೆಲೆಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.