ಆಭರಣ ಪ್ರಿಯರಿಗೆ ಸಿಹಿ ಸುದ್ದಿ!ವರ್ಷದ ಆರಂಭಕ್ಕೆ ಭಾರೀ ಕುಸಿತ ಕಂಡ ಬಂಗಾರ !ಇಳಿಕೆ ಸ್ತರದಲ್ಲಿಯೇ ಮುಂದುವರಿಯಲಿದೆಯಾ ಹಳದಿ ಲೋಹ
ಬಂಗಾರದ ಬೆಲೆಯಲ್ಲಿ ಏರಿಳಿತ ಕಾಣುತ್ತಲೇ ಇದೆ. ಈ ಒಂದು ವರ್ಷದಲ್ಲಿ ಬಂಗಾರದ ಬೆಲೆ ದಾಖಲೆ ಮಟ್ಟಕ್ಕೆ ಏರಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಆದರೆ ಈ ವಾರ ಆರಂಭವಾಗುತ್ತಿದ್ದ ಹಾಗೆಯೇ ಚಿನ್ನದ ಬೆಲೆ ಮತ್ತೆ ಕುಸಿಯಲು ಆರಂಭವಾಯಿತು.
80 ಸಾವಿರ ಗಡಿ ದಾಟಿದ್ದ ಬಂಗಾರದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬಂದಿದೆ. ನಿನ್ನೆ ಕೂಡಾ ದಿನದ ವಹಿವಾಟು ಅಂತ್ಯದ ವೇಳೆಗೆ ಬಂಗಾರದ ಬೆಲೆಯಲ್ಲಿ 251 ರೂಪಾಯಿ ಇಳಿಕೆ ಕಂಡು ಬಂದಿದೆ.
ಈ ಸುದ್ದಿ ಬರೆಯುವ ಹೊತ್ತಿಗೆ 22 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ 69,764 ರೂಪಾಯಿ ಆಗಿದೆ. ಈ ಬೆಲೆ ಇನ್ನಷ್ಟು ಇಳಿಯುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿದ್ದ ಯುದ್ದನಿಂತು ಮತ್ತೆ ಪರಿಸ್ಥಿತಿ ಸಹಜವಾಗುತ್ತಿರುವ ಕಾರಣ, ಚಿನ್ನದ ಬೆಲೆ ಕೂಡಾ ಮತ್ತಷ್ಟು ಇಳಿಕೆ ಕಾಣಬಹುದು ಎಂದು ಅಂದಾಜಿಸಲಾಗಿದೆ.
ಜಾಗತಿಕವಾಗಿ ಯುದ್ದಗಳು ನಡೆದಾಗ ಅದರ ನೇರ ಪರಿಣಾಮ ಚಿನ್ನದ ಬೆಲೆಯ ಮೇಲೆ ಬೀಳುತ್ತದೆ. ಈ ನಿಟ್ಟಿನಲ್ಲಿ ಹಳದಿ ಲೋಹದ ಬೆಲೆ ಮತ್ತೆ ಇಳಿಮುಖದತ್ತಲೇ ಸಾಗಲಿದೆ ಎನ್ನಲಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ಈ ಬೆಲೆ ಇಳಿಕೆ ಹೀಗೆ ಮುಂದುವರೆದು 70 ಸಾವಿರಕ್ಕೆ ತಲುಪಲಿದೆ ಎನ್ನಲಾಗಿದೆ. ಆದರೂ ಈ ಇಳಿಕೆ ಸ್ತರ ಕೂಡಾ ಹೀಗೆಯೇ ಮುಂದುವರಿಯಲಿದೆಯೇ ಎನ್ನುವುದಕ್ಕೆ ಮಾರುಕಟ್ಟೆಯೇ ಉತ್ತರ ನೀಡಬೇಕು.
ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಶ್ತುಇದೆ ಎಂದು ನಿಖರವಾಗಿ ತಿಳಿದುಕೊಳ್ಳಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.comಗೆ ಭೇಟಿ ನೀಡಬಹುದು.