Drumstick leaves: ನುಗ್ಗೆ ಸೊಪ್ಪಿನ ಅದ್ಭುತ ಆರೋಗ್ಯ ಪ್ರಯೋಜನಗಳು

Sat, 03 Aug 2024-5:28 pm,

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ನುಗ್ಗೆ ಸೊಪ್ಪಿನ ಎಲೆಗಳು ಕೂದಲು ಉದುರುವಿಕೆ, ರಕ್ತಹೀನತೆ, ಸಂಧಿವಾತ, ಥೈರಾಯ್ಡ್, ಅಸ್ತಮಾ, ದುರ್ಬಲ ರೋಗನಿರೋಧಕ ಶಕ್ತಿ, ಮಧುಮೇಹ ಸೇರಿದಂತೆ ಎಲ್ಲಾ ಕಾಯಿಲೆಗಳಿಗೆ & ತೂಕ ಕಡಿಮೆ ಮಾಡಲು ಉಪಯುಕ್ತವಾಗಿದೆ.

ಆಯುರ್ವೇದದಲ್ಲಿ ನುಗ್ಗೆ ಸೊಪ್ಪನ್ನು ಔಷಧೀಯ ಸಸ್ಯವೆಂದು ಪರಿಗಣಿಸಲಾಗಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಕ್ಯಾರೆಟ್‌ಗಿಂತ 10 ಪಟ್ಟು ಹೆಚ್ಚು ವಿಟಮಿನ್ Aಯನ್ನು ಹೊಂದಿರುತ್ತದೆ. ಹಾಲಿಗಿಂತ 17 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಕಿತ್ತಳೆಗಿಂತ ಏಳು ಪಟ್ಟು ಹೆಚ್ಚು ವಿಟಮಿನ್ C, ಬಾಳೆಹಣ್ಣಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್, 25 ಪಟ್ಟು ಹೆಚ್ಚು ಕಬ್ಬಿಣ ಮತ್ತು ಮೊಸರುಗಿಂತ ೯ ಪಟ್ಟು ಹೆಚ್ಚು ಪ್ರೋಟೀನ್ ಹೊಂದಿರುತ್ತದೆ. 

ನುಗ್ಗೆ ಸೊಪ್ಪು ಉಪಯೋಗಿಸುವುದರಿಂದ ತಾಯಂದಿರಲ್ಲಿ ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸಂಧಿವಾತದಂತಹ ಮಸ್ಕ್ಯುಲೋಸ್ಕೆಲಿಟಲ್ ನೋವಿನ ಪರಿಹಾರಕ್ಕೆ ನುಗ್ಗೆ ಸೊಪ್ಪು ಸಹಾಯ ಮಾಡುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಊತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪಾಲಿಫಿನಾಲ್‌ಗಳು ಮತ್ತು ಫ್ಲೇವನಾಯ್ಡ್‌ಗಳು ನೋವಿನಿಂದ ಪರಿಹಾರವನ್ನು ನೀಡುತ್ತದೆ.

ಕ್ಯಾಲ್ಸಿಯಂ ಸಮೃದ್ಧವಾಗಿರುವ ಇದು ಮೂಳೆಗಳನ್ನು ಬಲಪಡಿಸುತ್ತದೆ. ನುಗ್ಗೆ ಸೊಪ್ಪಿನ ನೀರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ. ನುಗ್ಗೆ ಸೊಪ್ಪಿನ ನೀರು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಮತ್ತು ವಿಟಮಿನ್ A, C, E, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಬೀಟಾ ಕ್ಯಾರೋಟಿನ್‌ನಲ್ಲಿ ಸಮೃದ್ದವಾಗಿದೆ. ಇದು ಅನೇಕ ಸೋಂಕುಗಳಿಂದ ದೂರವಿಡುತ್ತದೆ.

ಹಿಮೋಗ್ಲೋಬಿನ್ ಹೆಚ್ಚು ಮಾಡಾಲು ನುಗ್ಗೆ ಸೊಪ್ಪು ನೆರವಾಗುತ್ತದೆ. ವೇಗವಾಗಿ ತೂಕ ಕಳೆದುಕೊಳ್ಳಬೇಕಾದರೆ ನುಗ್ಗೆ ಸೊಪ್ಪಿನ ನೀರು ತುಂಬಾ ಉಪಯುಕ್ತವಾಗಿದೆ. ಮಧುಮೇಹದಿಂದ ಬಳಲುತ್ತಿರುವವರಿಗೆ ನುಗ್ಗೆ ಸೊಪ್ಪಿನ ನೀರು ತುಂಬಾ ಪ್ರಯೋಜನಕಾರಿ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರನ್ನು ಸೇವಿಸುತ್ತಾ ಬಂದರೆ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link