Dry Tulsi Indications: ಮನೆಯಲ್ಲಿ ಒಣಗಿರುವ ತುಳಸಿ ಈ ಅಶುಭ ಸಂಕೇತಗಳನ್ನು ನೀಡುತ್ತದೆ
1. ಹಿಂದೂ ಧರ್ಮದಲ್ಲಿ ತುಳಸಿ ಗಿಡದ ಪೂಜೆಯ ವಿಧಾನವನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ತುಳಸಿ ಪೂಜೆಯ ವೇಳೆ ಸಾಕಷ್ಟು ಕಾಳಜಿ ವಹಿಸಬೇಕು. ಭಾನುವಾರ, ಏಕಾದಶಿ ಮತ್ತು ಗ್ರಹಣ ಹೊರತುಪಡಿಸಿ ನಿಯಮಿತವಾಗಿ ತುಳಸಿ ಗಿಡಕ್ಕೆ ನೀರು ನೀಡಲಾಗುತ್ತದೆ. ನೀರಿನ ಕೊರತೆಯಿಂದ ತುಳಸಿ ಗಿಡ ಒಣಗುವುದು ಹಲವು ಬಾರಿ ಸಂಭವಿಸುತ್ತದೆ.
2. ಆದರೆ ಸರಿಯಾದ ಆರೈಕೆಯ ಹೊರತಾಗಿಯೂ ತುಳಸಿ ಸಸ್ಯವು ಒಣಗುತ್ತಿದ್ದರೆ, ನೀವು ಎಚ್ಚೆತ್ತುಕೊಳ್ಳಬೇಕು. ಇದು ಭವಿಷ್ಯದಲ್ಲಿ ದೊಡ್ಡ ತೊಂದರೆಗಳ ಸಂಕೇತವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ತುಳಸಿಗೆ ಸಂಬಂಧಿಸಿದೆ.ಬುಧ ಯಾರೊಬ್ಬರ ಮೇಲೆ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದರೆ, ಮನೆಯಲ್ಲಿನ ತುಳಸಿ ಸಸ್ಯವು ಒಣಗಲು ಪ್ರಾರಂಭಿಸುತ್ತದೆ.
3. ತುಳಸಿ ಗಿಡ ಒಣಗಲು ಪಿತ್ರ ದೋಷವೂ ಒಂದು ಕಾರಣ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಸರಿಯಾದ ಆರೈಕೆಯ ಹೊರತಾಗಿಯೂ ನಿಮ್ಮ ಮನೆಯಲ್ಲಿ ತುಳಸಿ ಸಸ್ಯವು ಮತ್ತೆ ಮತ್ತೆ ಒಣಗುತ್ತಿದ್ದರೆ, ಅದು ಪಿತ್ರ ದೋಷವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೆ ಜಗಳ ಹಾಗೂ ವ್ಯಾಜ್ಯಗಳು ಸಂಭವಿಸುತ್ತವೆ .
4. ತುಳಸಿ ಗಿಡವನ್ನು ಮನೆಯ ಛಾವಣಿಯ ಮೇಲೆ ಇಡಬೇಡಿ. ಹೀಗೆ ಮಾಡುವುದರಿಂದ ಜಾತಕದಲ್ಲಿ ಬುಧನ ಸ್ಥಾನ ದುರ್ಬಲವಾಗುತ್ತದೆ. ಬುಧನನ್ನು ಬುದ್ಧಿ, ಸಂಪತ್ತು ಮತ್ತು ವ್ಯವಹಾರದ ಗ್ರಹವೆಂದು ಪರಿಗಣಿಸಲಾಗಿದೆ.
5. ಹೊಸ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಅದು ಕೆಲವೇ ದಿನಗಳಲ್ಲಿ ಒಣಗಿ ಉದುರಿದರೆ ಅದು ಪಿತೃದೋಷವನ್ನೂ ಸೂಚಿಸುತ್ತದೆ.